ಸ್ಕಾರ್ಫ್ ತೆಗೆಯುವಂತೆ ಸೂಚನೆ; ಶಿಕ್ಷಕರ ವಿರುದ್ಧ ಮಂಗಳೂರು ವಿದ್ಯಾರ್ಥಿಗಳು ಪ್ರತಿಭಟನೆ

ಸ್ಕಾರ್ಫ್ ತೆಗೆಯುವಂತೆ ಸಂತ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಸೂಚನೆ ನೀಡಿದ ಹಿನ್ನಲೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಕಾಲೇಜು ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು...
ಸ್ಕಾರ್ಫ್ ತೆಗೆಯುವಂತೆ ಸೂಚನೆ; ಶಿಕ್ಷಕರ ವಿರುದ್ಧ ಮಂಗಳೂರು ವಿದ್ಯಾರ್ಥಿಗಳು ಪ್ರತಿಭಟನೆ
ಸ್ಕಾರ್ಫ್ ತೆಗೆಯುವಂತೆ ಸೂಚನೆ; ಶಿಕ್ಷಕರ ವಿರುದ್ಧ ಮಂಗಳೂರು ವಿದ್ಯಾರ್ಥಿಗಳು ಪ್ರತಿಭಟನೆ
ಮಂಗಳೂರು: ಸ್ಕಾರ್ಫ್ ತೆಗೆಯುವಂತೆ ಸಂತ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಸೂಚನೆ ನೀಡಿದ ಹಿನ್ನಲೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಕಾಲೇಜು ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.
ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಧರಿಸದಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಸಂಘಟನೆಯ ನೇತೃತ್ವದಲ್ಲಿ ಕೆಲ ವಿದ್ಯಾರ್ಥಿಗಳು ಕಾಲೇಜು ಎದುರು ಪ್ರತಿಭಟನೆ ನಡೆಸಿದ್ದಾರೆ. 
ಸಂಘಟನೆಯ ಕಾರ್ಯಕರ್ತರು ಸೇರಿದಂತೆ ಸುಮಾರು 20-30 ರಷ್ಟಿದ್ದ ಪ್ರತಿಭಟನಾಕಾರರು ಮಧ್ಯಾಹ್ನದ ವೇಳೆಗೆ ಕಾಲೇಜಿನ ಎದುರು ಜಮಾಯಿಸಿ ಪ್ರತಿಭಟನೆಗೆ ಮುಂದಾದರು. ಶೈಕ್ಷಣಿಕ ವರ್ಷಾರಂಭದಿಂದಲೇ ಸ್ಕಾರ್ಫ್ ಧರಿಸಲು ವಿರೋಧ ವ್ಯಕ್ತವಾಗಿತ್ತು. ಶಿಕ್ಷಣ ಸಂಸ್ಥೆಯ ನಿಮಯ ಪಾಲನೆ ಮಾಡುವಂತೆ ಒತ್ತಾಯಿಸಿದ್ದರು. ಅದಕ್ಕಾಗಿ ಪ್ರತಿಭಠನೆ ಮಂದಾಗಿದ್ದಾಗಿ ವಿದ್ಯಾರ್ಥಿನಿಯರು ಪ್ರತಿಭಟನೆ ವೇಳೆ ಹೇಳಿಕೊಂಡಿದ್ದಾರೆ. 
ತರಗತಿಯಲ್ಲಿ ಸ್ಕಾರ್ಫ್ ಧರಿಸಬಾರು ಎಂಬ ಶಿಕ್ಷಣ ಸಂಸ್ಥೆಯ ನಿಯಮವನ್ನು ಒಪ್ಪಿಕೊಂಡೇ ವಿದ್ಯಾರ್ಥಿನಿಯರು ಪೋಷಕರ ಸಮ್ಮುಖದಲ್ಲಿ ಕಾಲೇಜಿಗೆ ದಾಖಲಾಗಿದ್ದರು ಎಂಬ ವಿಚಾರ ಇದೀಗ ತಿಳಿದುಬಂದಿದೆ. 
ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಫಾತಿಮಾ ಎಂಬ ವಿದ್ಯಾರ್ಥಿನಿ, ಈ ಹಿಂದೆ ತರಗತಿಯಲ್ಲಿ ಸ್ಕಾರ್ಫ್ ಧರಿಸಲು ಅನುಮತಿ ನೀಡಲಾಗಿತ್ತು. ಆದರೆ, ಇದೀಗ ಇದ್ದಕ್ಕಿದ್ದಂತೆ ಸ್ಕಾರ್ಫ್ ತೆಗೆಯುವಂತೆ ತಿಳಿಸುತ್ತಿದ್ದಾರೆ. ಕಾಲೇಜು ಆಡಳಿತ ಮಂಡಳಿಯೊಂದಿಗೆ, ಸಿಎಫ್ಐ ಮಾತುಕತೆ ನಡೆಸಿತ್ತು. ನಿಯಮಗಳ ಬಗ್ಗೆ ಮಾತನಾಡಿತ್ತು. ಆದರೆ, ಇದಾವುದಕ್ಕೂ ಆಡಳಿತ ಮಂಡಳಿ ಕಿವಿಕೊಟ್ಟಿಲ್ಲ. ನಮ್ಮ ಹಕ್ಕುಗಳ ಬಗ್ಗೆ ಮಾತನಾಡಿದಾಗಲೂ ಅವರು ಕಿವಿಕೊಡಲಿಲ್ಲ ಎಂದು ಹೇಳಿದ್ದಾರೆ. 
ಹಿಜಾಬ್ ಧರಿಸುವ ಹಕ್ಕಿಗಾಗಿ ಸಂತ ಆಗ್ನೆಸ್ ಕಾಲೇಜಿನ ಎಲ್ಲಾ ತರಗತಿಗಳನ್ನೂ ಮುಸ್ಲಿಂ ವಿದ್ಯಾರ್ಥಿನಿಯರು ಬಹಿಷ್ಕರಿಸುತ್ತಿದ್ದಾರೆ. 
ತಮ್ಮ ಸಮವಸ್ತ್ರಗಳ ಜೊತೆಗೆ ಹಿಜಾಬ್ ಧರಸಲು ಅವಕಾಶ ನೀಡಲಾಗಿತ್ತು. ಈ ವರ್ಷ ಸ್ಕಾರ್ಫ್ ತೆಗೆಯುವಂತೆ ಸೂಚಿಸಿದ್ದಾರೆಂದು ತಿಳಿಸಿದ್ದಾರೆ. 
ಕಾಲೇಜು ಪ್ರಾಂಶುಪಾಲ ಜೆಸ್ವಿನಾ ಮಾತನಾಡಿ, ಶಿಸ್ತು ಕಾಪಾಡುವ ಸಲುವಾಗಿ ನಿಯಮಗಳನ್ನು ರೂಪಿಸಲಾಗಿದೆ. ತರಗತಿಗಳ ಒಳಗೆ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಬಾರದು ಎಂದು ಕಾಲೇಜಿನ ನಿಯಮಗಳಲ್ಲಿವೆ. ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗುವಾಗಲೇ ಈ ನಿಯಮಗಳನ್ನು ತಿಳಿಸಲಾಗಿತ್ತು. ಯಾವುದೇ ರೀತಿಯ ಮನವಿ ಪತ್ರಗಳನ್ನು ಸಲ್ಲಿಸದೆಯೇ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಪ್ರತಿಭಟನೆಗಿಳಿದಿದ್ದಾರೆ. ವಿದ್ಯಾರ್ಥಿಗಳಿಗೆ ಈ ವಿಚಾರ ಸಂಬಂಧ ಯಾವುದೇ ರೀತಿಯ ಸಮಸ್ಯೆಗಳಿದ್ದರು. ಅದನ್ನು ಆಡಳಿತ ಮಂಡಳಿ ವಿದ್ಯಾರ್ಥಿಗಳು ಹಾಗೂ ಪೋಷಕರ ನಡುವೆ ನಿವಾರಣೆ ಮಾಡಲು ಸಿದ್ಧವಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com