ಫೇಸ್ ಬುಕ್ ನಲ್ಲಿ ಅಶ್ಲೀಲ ಮೆಸೇಜ್; ದೂರು ದಾಖಲಿಸಲಿರುವ ಭಾವನಾ ಬೆಳಗೆರೆ!

ಫೇಸ್ ಬುಕ್ ನಲ್ಲಿ ತಮಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೋರ್ವನ ವಿರುದ್ಧ ದೂರು ನೀಡಲು ಹಿರಿಯ ಪತ್ರಕರ್ತ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಮುಂದಾಗಿದ್ದಾರೆ.
ಫೇಸ್ ಬುಕ್ ಪೋಸ್ಟ್ ಚಿತ್ರ
ಫೇಸ್ ಬುಕ್ ಪೋಸ್ಟ್ ಚಿತ್ರ
Updated on
ಬೆಂಗಳೂರು: ಫೇಸ್ ಬುಕ್ ನಲ್ಲಿ ತಮಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೋರ್ವನ ವಿರುದ್ಧ ದೂರು ನೀಡಲು ಹಿರಿಯ ಪತ್ರಕರ್ತ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಮುಂದಾಗಿದ್ದಾರೆ.
ಈ ಬಗ್ಗೆ ಸ್ವತಃ ಭಾವನಾ ಬೆಳಗೆರೆ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಪ್ರದೀಪ್​ ಕುಮಾರ್​ ಪಾಯಲ್​ ಎಂಬ ಖಾತೆಯಿಂದ ಸಾಕಷ್ಟು ಹಿಂದೆಯೇ ಅಶ್ಲೀಲ ಸಂದೇಶಗಳು, ಚಿತ್ರಗಳು ಬರುತ್ತಿವೆ. ನಾನು ಬೇರೆ ಬೇರೆ ಕೆಲಸಗಳಲ್ಲಿ ನಿರತಳಾಗಿದ್ದರಿಂದ ಪೇಸ್ ಬುಕ್ ಮೆಸೆಂಜರ್​ನನ್ನು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಆದರೆ ಆ ವ್ಯಕ್ತಿಯಿಂದ ನನಗೆ ವಿಡಿಯೋ ಕರೆಗಳು ಬಂದ ನಂತರ ಈ ವಿಷಯ ನನಗೆ ತಿಳಿಯಿತು ಎಂದು ಭಾವನಾ ಬೆಳಗೆರೆ ಹೇಳಿದ್ದಾರೆ. 
ಅಲ್ಲದೆ ಈ ಬಗ್ಗೆ ಸೈಬರ್​ ಕ್ರೈಂಗೆ ದೂರು ನೀಡಲು ಭಾವನಾ ಮುಂದಾಗಿದ್ದು, ನಾಳೆ ಬೆಳಗ್ಗೆ ಸೈಬರ್ ಕ್ರೈ ಪೊಲೀಸರಿಗೆ ದೂರು ನೀಡುವುದಾಗಿ ಭಾವನಾ ಹೇಳಿದ್ದಾರೆ. 
"ಸಾಮಾಜಿಕವಾಗಿ ಆಕ್ಟಿವ್​ ಇರಬೇಕಾದ್ದರಿಂದ ಅವನು ಯಾರೂ ಎಂಬುದು ಗೊತ್ತಿಲ್ಲದಿದ್ದರೂ ಅವನ ಫ್ರೆಂಡ್​ ರಿಕ್ವೆಸ್ಟ್​ ಒಪ್ಪಿಕೊಂಡಿದ್ದೆ. ಅಕೌಂಟ್​ ಬ್ಲಾಕ್​ ಮಾಡಬಹುದು ಆದರೆ, ಅವನಿಗೆ ತಕ್ಕ ಪಾಠ ಕಲಿಸಬೇಕು ಹಾಗಾಗಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದು ಭಾವನಾ ಫೇಸ್ ಬುಕ್ ನಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com