ಬೆಳಗಾವಿಯಲ್ಲಿ ದೇಶದ ಅತೀ ಎತ್ತರದ ರಾಷ್ಟ್ರಧ್ವಜ ಸ್ತಂಭ ಲೋಕಾರ್ಪಣೆ

ದೇಶದ ಅತೀ ಎತ್ತರದ ತ್ರಿವರ್ಣ ಧ್ವಜ ಸ್ತಂಭ ಹಾಗೂ ಉದ್ದದ ರಾಷ್ಟ್ರಧ್ವಜವನ್ನು ರಾಷ್ಟ್ರೀಯ ಹೆದ್ದಾರಿ ಹತ್ತಿರ ಬೆಳಗಾವಿ ನಗರದ ಕೋಟೆ ಕೆರೆ ಅವರಣದಲ್ಲಿ ನಿರ್ಮಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಳಗಾವಿ: ದೇಶದ ಅತೀ ಎತ್ತರದ ತ್ರಿವರ್ಣ ಧ್ವಜ ಸ್ತಂಭ ಹಾಗೂ ಉದ್ದದ ರಾಷ್ಟ್ರಧ್ವಜವನ್ನು ರಾಷ್ಟ್ರೀಯ ಹೆದ್ದಾರಿ ಹತ್ತಿರ ಬೆಳಗಾವಿ ನಗರದ ಕೋಟೆ ಕೆರೆ ಅವರಣದಲ್ಲಿ ನಿರ್ಮಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಫಿರೋಜ್ ಸೇಠ್ ಅವರು ಧ್ವಜ ಸ್ತಂಭವನ್ನು ಸೋಮವಾರ ಲೋಕಾರ್ಪಣೆ ಮಾಡಿದರು. 
ಧ್ವಜ ಸ್ತಂಭವನ್ನು ಲೋಕಾರ್ಪಣೆ ಮಾಡುವ ಕ್ಷಣಕ್ಕೆ ಸಾವಿರಾರು ನಾಗರೀಗರು, ನಗರದ ಧರ್ಮಗುರುಗಳು, ಗಣ್ಯರು ಹಾಗೂ ಅಧಿಕಾರಿಗಳು ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿಯವರು, ರಾಷ್ಟ್ರದ ಅತೀ ಎತ್ತರ ಧ್ವಜ ಸ್ತಂಭವನ್ನು ನಗರ, ರಾಜ್ಯ ಹಾಗೂ ದೇಶಕ್ಕೆ ಸಮರ್ಪಣೆ ಮಾಡುತ್ತಿರವುದಕ್ಕೆ ಬಹಳ ಹೆಮ್ಮೆಯಾಗುತ್ತಿದೆ. ದೇಶ ಯಾರೋ ಒಬ್ಬರದಲ್ಲ. ಎಲ್ಲರ ದೇಶ. ಎಲ್ಲರೂ ಸಹೋದರರಂತೆ ಸೌಹಾರ್ದತೆಯಿಂದ ಇರಬೇಕು. ಆಗ ಮಾತ್ರ ರಾಮರಾಜ್ಯ. ಸ್ಥಾಪನೆ ಸಾಧ್ಯ ಎಂದು ಹೇಳಿದ್ದಾರೆ. 
ಬಳಿಕ ಮಾತನಾಡಿರುವ ಶಾಸಕ ಫಿರೋಜ್ ಸೇಠ್ ಅವರು, ರಾಷ್ಟ್ರ ಹಾಗೂ ತ್ರಿವರ್ಣ ಧ್ವಜ ಎರಡೂ ಒಂದೇ... ಎಲ್ಲರೂ ಸಮಾನದು ಎಂದು ತಿಳಿಸಿದರು.
ವಾಘಾ ಗಡಿಯಲ್ಲಿ 105 ಮೀಟರ್ ಎತ್ತರದ ಧ್ವಜ ಸ್ತಂಭವಿದ್ದರೆ, ಪುಣೆಯಲ್ಲಿ 107 ಮೀಟರ್ ಎತ್ತರದ ಧ್ವಜ ಸ್ತಂಭವಿದೆ. ಇದೀಗ ಬೆಳಗಾವಿಯಲ್ಲಿ 110 ಮೀಟರ್ ಎತ್ತರದ ಶಾಶ್ವತ ಧ್ವಜ ಸ್ತಂಭವನ್ನು ಸ್ಥಾಪಿಸಲಾಗಿದ್ದು, ಇದು ದೇಶದ ಅತೀ ಎತ್ತರದ ಧ್ವಜಸ್ತಂಭವಾಗಿದೆ. ಧ್ವಜ ಸ್ತಂಭದ ವ್ಯಾಸದ ಕೆಳಭಾಗ 1.90 ಮೀಟರ್, ಮೇಲ್ಭಾಗ 0.60 ಮೀಟರ್ ಇದೆ. 
ಧ್ವಜ 9600 ಚದರ ಅಡಿ ಹೊಂದಿದೆ. ಧ್ವಜ ತೂಕ ಒಟ್ಟು 36 ಟನ್ ಗಳಷ್ಟಿದ್ದರೆ, ಬಾವುಟದ ಬಟ್ಟೆಯ ತೂಕ 500 ಕೆಜಿಗಳಷ್ಟಿದೆ. ಧ್ವಜಕ್ಕೆ ಬಜಾಜ್ ಕಂಪನಿಯವರು ಡೇನಿಯರ್ ಪಾಲಿಸ್ಟರ್ ಬಟ್ಟೆ ಬಳಸಿ ಸಿದ್ಧಪಡಿಸಿಕೊಂಡಿದ್ದಾರೆ. 
ಈ ಧ್ವಜ ದಿನದ 24 ಗಂಟೆಗಳ ಕಾಲವೂ ಹಾರಾಟದಲ್ಲಿರಲಿದೆ. ಅಲ್ಲದೆ, ರಾತ್ರಿ ಹೊತ್ತೂ ಕಾಣಿಸುವ ಸಲುವಾಗಿ ಧ್ವಜಕ್ಕೆ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಧ್ವಜ ಅತೀ ಹೆಚ್ಚು ಭಾರವಿರುವುದರಿಂದ ಮಷಿನ್ ಮೂಲಕವೇ ಧ್ವಜಾರೋಹಣ ಮಾಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com