ರಾಹುಲ್ ಗಾಂಧಿ ಭಾಷಣದಲ್ಲಿ ಮತ್ತೊಮ್ಮೆ ಯಡವಟ್ಟು: ವಿಶ್ವೇಶ್ವರಯ್ಯ ಹೆಸರು ಹೇಳಲು ತಡವರಿಸಿದ ಎಐಸಿಸಿ ಅಧ್ಯಕ್ಷ

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಳೆದ ಬಾರಿ ಬಸವಣ್ಣನವರ ವಚನವನ್ನು ಸರಿಯಾಗಿ ಉಚ್ಛರಿಸದೇ ಮುಜುಗರ
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 
ಚಾಮರಾಜನಗರ: ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಳೆದ ಬಾರಿ ಬಸವಣ್ಣನವರ ವಚನವನ್ನು ಸರಿಯಾಗಿ ಉಚ್ಛರಿಸದೇ ಮುಜುಗರ ಎದುರಿಸಿದ್ದರು.  ಈಗ ಚಾಮರಾಜನಗರದಲ್ಲಿ ಅಂಥಹದ್ದೇ ಯಡವಟ್ಟು ಮಾಡಿಕೊಂಡಿದ್ದಾರೆ. 
ಮೈಸೂರಿನ ಮಹಾರಣಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಬಳಿಕ ಚಾಮರಾಜನಗರದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಮಾಡುವ ವೇಳೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ಹೆಸರು ಉಚ್ಛರಿಸಲು ರಾಹುಲ್ ಗಾಂಧಿ ತಡವರಿಸಿದ್ದಾರೆ. ಅಷ್ಟೇ ಅಲ್ಲದೇ ಮಹಾತ್ಮಾ ಗಾಂಧಿಯಿಂದ ರಾಜರ್ಷಿ ಎಂದು ಮೆಚ್ಚುಗೆ ಗಳಿಸಿದ್ದ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಹೇಳುವುದಕ್ಕೂ ತಡವರಿಸಿದ್ದಾರೆ. 
ವಿಶ್ವೇಶ್ವರಯ್ಯ ಹೆಸರನ್ನು ಹೇಳುವ ಬದಲಿ ವಿಶ್ವೇಶ್ವ.... ವಿಶ್ವರಯ್ಯ ಎಂದೂ ಕೃಷ್ಣ ರಾಜ ಒಡೆಯರ್ ಹೆಸರು ಹೇಳುವಾಗ ಕೃಷ್ಣನ ರಾಜ ಒಡೆಯರ್ ಎಂದೂ ಹೇಳಿದ್ದಾರೆ. ರಾಹುಲ್ ಗಾಂಧಿ ಭಾಷಣದ  ಉಚ್ಚಾರಣಾ ದೋಷ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com