'ನಮ್ಮ ಬೆಂಗಳೂರು ಪ್ರಶಸ್ತಿ' ನಿರಾಕರಿಸಿದ ಐಪಿಎಸ್ ಅಧಿಕಾರಿ ಡಿ ರೂಪಾ

ನಮ್ಮ ಬೆಂಗಳೂರು ಫೌಂಡೇಶನ್ ನೀಡುವ 'ನಮ್ಮ ಬೆಂಗಳೂರು ಪ್ರಶಸ್ತಿ' ಸ್ವೀಕರಿಸಲು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಲಿಲ್ ಅವರು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ...
ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್
ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್
Updated on
ಬೆಂಗಳೂರು; ನಮ್ಮ ಬೆಂಗಳೂರು ಫೌಂಡೇಶನ್ ನೀಡುವ 'ನಮ್ಮ ಬೆಂಗಳೂರು ಪ್ರಶಸ್ತಿ' ಸ್ವೀಕರಿಸಲು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ. 
ಪ್ರಶಸ್ತಿ ಕುರಿತಂತೆ 'ನಮ್ಮ ಬೆಂಗಳೂರು ಫೌಂಡೇಶನ್'ಗೆ ಪತ್ರ ಬರೆದಿರುವ ರೂಪಾ ಅವರು, ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದಕ್ಕೆ ಧನ್ಯವಾದಗಳು. ಆದರೆ, ಈ ಪ್ರಶಸ್ತಿ ಭಾರೀ ಮೊತ್ತದ ನಗದು ಪುರಸ್ಕಾರ ಹೊಂದಿರುವುದರಿಂದ ಅದನ್ನು ಸ್ವೀಕರಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. 
ಪ್ರತೀಯೊಬ್ಬ ಸರ್ಕಾರಿ ನೌಕರರೂ ಯಾವುದೇ ರಾಜಕೀಯ ಅಥವಾ ರಾಜಕೀಯಕ್ಕೆ ಹತ್ತಿರ ಇರುವ ಸಂಘಟನೆಗಳಿಂಗ ತಟಸ್ಥವಾಗಿದ್ದು, ಅಂತರ ಕಾಯ್ದುಕೊಳ್ಳಬೇಕೆಂಬುದು ನಿಯಮವಾಗಿದೆ. ಹಾಗಿದ್ದಾಗ ಮಾತ್ರ ಸಾರ್ವಜನಿಕ ಸೇವಕರು ಜನರ ದೃಷ್ಟಯಲ್ಲಿ ಪರಿಶುದ್ಧರಾಗಿ ಇರಲು ಸಾಧ್ಯ. ಅಲ್ಲದೆ, ಚುನಾವಣೆ ಹತ್ತಿರುವುದರಿಂದ ಇನ್ನು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ. 
ನೀವು ಹಲವಾರು ವರ್ಷಗಳಿಂದ ಜನರನ್ನು ಗುರ್ತಿಸಿ ಪ್ರಶಸ್ತಿ ನೀಡುತ್ತಿರುವುದಕ್ಕಾಗಿ ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನಿಮ್ಮ ಫೌಂಡೇಷನ್ ನ ಇಂಥ ಸಾರ್ವಜನಿಕ ಕೇಂದ್ರಿತ ಮತ್ತು ಸಾಮಾಜಿಕ ಕಳಕಳಿಯ ಕೆಲಸಕ್ಕೆ ನನ್ನ ಸಹಕಾರ ಮತ್ತು ಬೆಂಬಲ ಯಾವತ್ತಿಗೂ ಇದ್ದೇ ಇರುತ್ತದೆ. ಆದರೆ, ಪ್ರಶಸ್ತಿ ಸ್ವೀಕರಿಸದಿರುವುದಕ್ಕೆ ದಯವಿಟ್ಟು ಕ್ಷಮಿಸಿ ಎಂದು ರೂಪಾ ಅವರು ಪತ್ರದಲ್ಲಿ ತಿಳಿಸಿದ್ದಾರೆ. 
ಬೆಂಗಳೂರನ್ನು ಬದುಕಲು ಯೋಗ್ಯವಾಗಿಸುವ ಸಹನೀಯ ಸ್ಥಳವನ್ನಾಗಿಸಲು ಅಪರಿಮಿತವಾಗಿ ದುಡಿಯುತ್ತಿರುವ ವ್ಯಕ್ತಿಗಳನ್ನು ಗುರ್ತಿಸಲು ನಮ್ಮ ಬೆಂಗಳೂರು ಪ್ರತಿಷ್ಠಾನ ನಮ್ಮ ಬೆಂಗಳೂರು ಪ್ರಶಸ್ತಿಗಳನ್ನು ನೀಡುತ್ತಿದೆ. ನಗರದ ನಿಜವಾದ ಹೀರೋಗಳಿಗೆ ಜನರು ಈ ಪ್ರಶಸ್ತಿಗಳ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಅಂತೆಯೇ ಈ ಹೀರೋಗಳಿಂದ ಪ್ರೇರಣೆ ಪಡೆಗು ಬೆಂಗಳೂರಿನ ಉಜ್ವಲ ಭವಿಷ್ಯದತ್ತ ಕೆಲಸ ಮಾಡಲು ಮುಂದಾಗುವಂತೆ ಇದು ಮಾಡುತ್ತದೆ. 
ಈ ಬಾರಿ ಪ್ರತಿಷ್ಠಾನವು ಬೆಂಗಳೂರು ನಗರದ ಪುನರುಜ್ಜೀವನಕ್ಕಾಗಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಗುರ್ತಿಸಿ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದೆ. ಐದು ವಿಭಾಗಗಳಲ್ಲಿ 41 ಮಂದಿಯ ಹೆಸರು ಅಂತಿಮ ಸುತ್ತಿಗೆ ಆಯ್ಕೆಯಾಗಿದೆ. ಮೈಕ್ರೋಲ್ಯಾಂಡ್ ನ ಸ್ಥಾಪಕ ಅಧ್ಯಕ್ಷ ಪ್ರದೀಕ್ ಕರ್ ನೇತೃತ್ವದ ವಿವಿಧ ಕ್ಷೇತ್ರಗಳ 23 ತಜ್ಞರ ಸಮಿತಿಯು 41 ಜನರ ಅಂತಿಮ ಪಟ್ಟಿಯಲ್ಲಿ 5 ಮಂದಿಯನ್ನು ವಿಜೇತರ ಹೆಸರನ್ನು ಘೋಷಿಸಲಿದೆ. ಈ ಐವರಲ್ಲಿ ರೂಪಾ ಅವರು ಕೂಡ ಒಬ್ಬರಾಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com