1,680 ಕೋಟಿ ಮೊತ್ತದ ಬ್ಯಾಂಕ್ ಹಗರಣ ದಾಖಲಿಸಿದ ಬೆಂಗಳೂರು ಸಿಬಿಐ

ಕ್ಷಿಣ ಭಾರತದಲ್ಲಿಯೂ ಹಲವು ಬ್ಯಾಂಕುಗಳಲ್ಲಿ ಹಗರಣ ನಡೆದಿರುವುದನ್ನು ಸಿಬಿಐ ವರದಿ ಮಾಡಿದೆ. ಸುಮಾರು 1, 680 ಕೋಟಿ ಮೊತ್ತದ ಹಗರಣ ನಡೆದಿದೆ ಎಂದು ಸಿಬಿಐ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು : ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ದಕ್ಷಿಣ ಭಾರತದಲ್ಲಿಯೂ ಹಲವು ಬ್ಯಾಂಕುಗಳಲ್ಲಿ ಹಗರಣ ನಡೆದಿರುವುದನ್ನು ಸಿಬಿಐ ವರದಿ ಮಾಡಿದೆ. ಸುಮಾರು 1, 680 ಕೋಟಿ ಮೊತ್ತದ ಹಗರಣ ನಡೆದಿದೆ ಎಂದು  ಸಿಬಿಐ ತಿಳಿಸಿದೆ.

ಈ ವರ್ಷದಲ್ಲಿ ಆರು ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಸಿಬಿಐ , ಕಾನಿಷ್ಕ ಗೋಲ್ಡ್ ಕಂಪನಿ ವಂಚನೆ ಸೇರಿದಂತೆ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 1.268 ಕೋಟಿ ಮೊತ್ತದ ಪ್ರಮುಖ ಮೂರು ಪ್ರಕರಣಗಳನ್ನು ಸಿಬಿಐ ದಾಖಲಿಸಿಕೊಂಡಿದೆ.

ಈ ಪ್ರಕರಣ ಸಂಬಂಧ ಇನ್ನೂ ಯಾರನ್ನೂ ಬಂಧಿಸಿಲ್ಲ. ಆದರೆ, ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಹಲವು ಪ್ರಕರಣಗಳಲ್ಲಿ ನಕಲಿ ದಾಖಲಾತಿ , ತಪ್ಪು ಮೌಲ್ಯಮಾಪನ ಮಾಡಿರುವುದು ಕಂಡುಬಂದಿದ್ದು, ಇದರಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ಯೂಕೊ ಬ್ಯಾಂಕಿನಲ್ಲಿ 19 ಕೋಟಿ ವಂಚನೆಗೆ ಸಂಬಂಧಿಸಿದಂತೆ ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ. ಜಯನಗರ ಶಾಖೆಯ ಬ್ಯಾಂಕ್ ಮ್ಯಾನೇಜರ್ ಕೆ. ಆರ್. ಸರೋಜ ವಿವಿಧ ಬ್ಯಾಂಕ್ ಯೋಜನೆಯಡಿ 2013 ರಿಂದ 2016ರವರೆಗೆ 18 ಜನರಿಗೆ ಬಿ.ಎಸ್. ಶ್ರೀನಾಥ್ ಎಂಬ ಮಧ್ಯವರ್ತಿ ಮೂಲಕ ಸಾಲ ನೀಡಿದ್ದಾರೆ. ಸಾಲಕ್ಕೆ ಅರ್ಹರಾಗುವಂತೆ ಅರ್ಜಿದಾರರು ನಕಲಿ ದಾಖಲಾತಿ ನೀಡಿರುವುದು ಬೆಳಕಿಗೆ ಬಂದಿದೆ.

ಸಾಲ ಮಂಜೂರು ಮಾಡುವ ನೀಡುವ ಮೌಲ್ಯಮಾಪನ ವರದಿಯಲ್ಲಿ ಪ್ರಭಾವ ಬೀರಲಾಗಿದೆ ಎಂದು ಆರ್ ಮತ್ತು ಜಿ ಅಸೋಸಿಯೇಟ್ಸ್  ಮಾಲೀಕ  ಗೋಪಿನಾಥ್ ಆರ್ ಅಗ್ನಿಹೋತ್ರಿ ಹಾಗೂ ಎನ್ ವೆಂಕಟೇಶ್ ಅಸೋಸಿಯೇಟ್ಸ್ ನ ವೆಂಕಟೇಶ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com