ಬೆಂಗಳೂರು ವಿಮಾನ ನಿಲ್ದಾಣ ಕಸ್ಟಮ್ಸ್ ಎಸ್ ಪಿ ಬಳಿ ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಪತ್ತೆ ಹಚ್ಚಿದ ಸಿಬಿಐ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಸೂಪರಿಂಟೆಂಡ್ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಸಿಬಿಐ, ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿರುವುದನ್ನು ಪತ್ತೆ ಹಚ್ಚಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಸೂಪರಿಂಟೆಂಡ್ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಸಿಬಿಐ, ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿರುವುದನ್ನು ಪತ್ತೆ ಹಚ್ಚಿದೆ.

ಎ. ಎಂ. ಸಫೀವುಲ್ಲಾ ಬಂಧಿತ  ಅಧಿಕಾರಿ.  ಲಂಚ ಪ್ರಕರಣದಲ್ಲಿ ಇತ್ತೀಚಿಗೆ ಈತ ಸಿಕ್ಕಿ ಬಿದ್ದಿದ.

ಈತನ ಮೂಲ ಆದಾಯಕ್ಕಿಂತ ಶೇ. 97. 34ರಷ್ಟು ಆದಾಯ ದಿಗ್ವುಣಗೊಂಡಿದ್ದು,ಅಕ್ರಮ ಆಸ್ತಿ ಸಂಪಾದಿಸಿರುವುದು ಬೆಳಕಿಗೆ ಬಂದಿದೆ.

ರಾಯಚೂರು ನಿವಾಸಿಯಾಗಿರುವ ಸಫೀವುಲ್ಲಾ , ಆಮದು ಮಾಡಿಕೊಂಡಿರುವ ಕೆಲ ಸರಕುಗಳ ಬಿಡುಗಡೆಗಾಗಿ 30 , 000 ರೂ ಲಂಚ ನೀಡುವಂತೆ ಬೆಂಗಳೂರು ಮೂಲದ ವ್ಯಾಪಾರಿಯೊಬ್ಬರಿಗೆ ಬೇಡಿಕೆ ಇಟ್ಟಿದೆ. ಈ ಸಂಬಂಧ ಮಾರ್ಚ್ 1 ರಂದು ಪ್ರಕರಣ ದಾಖಲಾಗಿ, ಸಫೀವುಲ್ಲಾ ಕೆಲಸದಿಂದ ವಜಾಗೊಂಡಿದ್ದ.

ಕೇಂದ್ರೀಯ ಅಬಕಾರಿ ಇನ್ಸ್ ಪೆಕ್ಟರ್ ಆಗಿ 1992ರಲ್ಲಿ ಕೆಲಸಕ್ಕೆ ಸೇರಿದ್ದ ಸಫೀವುಲ್ಲಾ, ನಂತರ ಎಸ್ ಪಿ ಆಗಿ ಬಡ್ತಿ ಪಡೆದಿದ್ದರು. ಎಸ್ಪಿಗೆ ಆಗಿ ಬಡ್ತಿ ಸಿಕ್ಕುತ್ತಿದ್ದಂತೆ ಭ್ರಷ್ಟಾಚಾರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಸಿಬಿಐ ಮಾಹಿತಿಯಿಂದ ತಿಳಿದುಬಂದಿದೆ.

2009 ಮತ್ತು 2018 ರ ಅವಧಿಯಲ್ಲಿ ಸಫೀವುಲ್ಲಾ 27.10 ಲಕ್ಷ ರೂ, ವೇತನ ಪಡೆದುಕೊಂಡಿದ್ದಾರೆ. ಆದರೆ, ಈತನ ಇತರೆ  ಆದಾಯದಲ್ಲಿ ಮಾಡಿದ್ದ ವೆಚ್ಚದ ಮೊತ್ತ   54. 94 ಲಕ್ಷ ರೂ ಆಗಿದೆ ಎಂದು ಸಿಬಿಐ  ಅಧಿಕಾರಿಗಳು ತಿಳಿಸಿದ್ದಾರೆ.

2016ರ ನಂತರ ಇದೇ ಮೊದಲ ಬಾರಿಗೆ ವಿಮಾನ ನಿಲ್ದಾಣ  ಕಸ್ಟಮ್ಸ್ ಅಧಿಕಾರಿಯೊಬ್ಬರು ಲಂಚ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.2015ರಲ್ಲಿ ಮಲೇಷ್ಯಾಕ್ಕೆ ಸಿಲ್ಕ್ ವಸ್ತುಗಳನ್ನು ರಪ್ತು ಮಾಡುವ ಸಂಬಂಧ 2.5 ಲಕ್ಷ ಲಂಚ ಪ್ರಕರಣವೊಂದರಲ್ಲಿ ಕಸ್ಟಮ್ಸ್ ಎಸ್ ಪಿ ಒಬ್ಬರು ಸಿಕ್ಕಿ ಬಿದಿದ್ದರು.





Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com