ಮೈಸೂರು ಪೊಲೀಸರ ವೆಬ್​ಸೈಟ್​ ಹ್ಯಾಕ್, 'ಪಾಕಿಸ್ತಾನ ಜಿಂದಾಬಾದ್' ಪೋಸ್ಟ್ ಹಾಕಿದ ಕಿಡಿಗೇಡಿಗಳು

ಮೈಸೂರು ನಗರ ಪೊಲೀಸರ ಅಧಿಕೃತ ವೆಬ್​ಸೈಟ್ ಅ​ನ್ನು ದುಷ್ಕರ್ಮಿಗಳು ಭಾನುವಾರ ಹ್ಯಾಕ್​ ಮಾಡಿದ್ದು,
ಪಾಕಿಸ್ತಾನ ಜಿಂದಾಬಾದ್ ಪೋಸ್ಟ್ ಹಾಕಿರುವುದು.
ಪಾಕಿಸ್ತಾನ ಜಿಂದಾಬಾದ್ ಪೋಸ್ಟ್ ಹಾಕಿರುವುದು.
ಮೈಸೂರು: ಮೈಸೂರು ನಗರ ಪೊಲೀಸರ ಅಧಿಕೃತ ವೆಬ್​ಸೈಟ್ ಅ​ನ್ನು ದುಷ್ಕರ್ಮಿಗಳು ಭಾನುವಾರ ಹ್ಯಾಕ್​ ಮಾಡಿದ್ದು, ಅದರಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂಬ ಸಂದೇಶ ಹಾಕಿದ್ದಾರೆ.
ವೆಬ್​ ಸೈಟ್​ ಹ್ಯಾಕ್​ ಮಾಡಿದ ಕಿಡಿಗೇಡಿಗಳು ಅದರಲ್ಲಿ ಹೊಸ ಪೇಜ್ ಕ್ರಿಯೇಟ್ ಮಾಡಿ, ಪಾಕಿಸ್ತಾನ ಜಿಂದಾಬಾದ್​, ಎಂಬ ಸಂದೇಶ ಹಾಕಿದ್ದಾರೆ. ಅಲ್ಲದೆ ತ್ರಿವರ್ಣ ಧ್ವಜ ತುಳಿಯುತ್ತಿರುವ ಫೋಟೋವನ್ನೂ ಹಾಕಿದ್ದಾರೆ.
ವೆಬ್​ ಸೈಟ್​ ಹ್ಯಾಕ್ ಮಾಡಿರುವುದು ಗಮಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಆ ಪೋಸ್ಟ್ ಅನ್ನು ತೆಗೆದು ಹಾಕಿದ್ದಾರೆ. 
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com