ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಳೆದ 3 ಪಂದ್ಯಗಳ ವೇಳೆ ಈ ಘಟನೆ ನಡೆದಿದ್ದು, ಅಭಿಮಾನಿಗಳು ಕಬ್ಬನ್ ಪಾರ್ಕ್ ನಲ್ಲಿ ಬೈಕ್ ಪಾರ್ಕಿಂಗ್ ಮಾಡಿ ಆರ್‌ಸಿಬಿ ಪಂದ್ಯಗಳನ್ನು ನೋಡಲು ತೆರಳಿದ್ದಾಗೆ ಬೈಕ್ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಪ್ರಮುವಾಗಿ ಕಳೆದ ಭಾನುವಾರ ನಡೆದ ಆರ್ ಸಿಬಿ- ಚೆನ್ನೈ ಮ್ಯಾಚ್ ನೋಡಲು ಹೋಗಿದ್ದ ಪ್ರೇಕ್ಷಕರ ಹಲವು ಬೈಕ್ ಗಳು ಕಳ್ಳತನವಾಗಿದೆ. ಪ್ರೇಕ್ಷಕರು ಅತ್ತ ಬೈಕ್ ಪಾರ್ಕ್ ಮಾಡಿ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ಇತ್ತ ಬೈಕ್ ಕಳ್ಳರು ಕಬ್ಬನ್ ಪಾರ್ಕ್ ನಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಕಳೆದ 3 ಪಂದ್ಯಾವಳಿಗಳು ಸೇರಿ ಕಳ್ಳರು ಒಟ್ಟು 15 ಬೈಕ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದಾರೆ.