ನೀತಿ ಸಂಹಿತೆ ಎಫೆಕ್ಟ್: ಬೆಂಗಳೂರು ನಗರದಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖ

ಚುನಾವಣಾ ನೀತಿ ಸಂಹಿತೆಯ ಅಂಗವಾಗಿ ಪೋಲೀಸರು ಕಟ್ಟು ನಿಟ್ಟಾದ ಕ್ರಮ ಅನುಸರಿಸುತ್ತಿರುವ ಕಾರಣ ಬೆಂಗಳೂರಿನಲ್ಲಿ ಅಪರಾಧಗಳ ಪ್ರಮಾಣ ಕೊಂಚ ಇಳಿಮುಖವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಚುನಾವಣಾ ನೀತಿ ಸಂಹಿತೆಯ ಅಂಗವಾಗಿ ಪೋಲೀಸರು ಕಟ್ಟು ನಿಟ್ಟಾದ ಕ್ರಮ ಅನುಸರಿಸುತ್ತಿರುವ ಕಾರಣ ಬೆಂಗಳೂರಿನಲ್ಲಿ ಅಪರಾಧಗಳ ಪ್ರಮಾಣ ಕೊಂಚ ಇಳಿಮುಖವಾಗಿದೆ.
ಕಳೆದೆರಡು ವಾರಗಳಲ್ಲಿ ನಗರದ ಸರಗಳ್ಳತನ, ದರೋಡೆ ಪ್ರಮಾಣ ಇಳಿದಿದೆ. ನಗರ್ದಾದ್ಯಂತ ಚೆಕ್ ಪೋಸ್ಟ್ ಗಳು, ಪೋಲೀಸರು ರೌಡಿಗಳು, ಅಪರಾಧಿಗಳ ಮನೆಗೆ ಭೇಟಿ ನಿಡುತ್ತಿರುವುದು  ಈ ಕಾರಣಕ್ಕಾಗಿ ಅಪರಾಧವೆಸಗಿದವರು ಪೋಲೀಸರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ.  ಹೀಗಾಗಿ ಅಪರಾಧ ಪ್ರಕರಣ ತಗ್ಗಿದೆ ಎನ್ನಲಾಗುತ್ತಿದೆ.
ಇದೇ ವೇಳೆ ಇದಾಗಲೇ ನಡೆದ ಅಪರಾಧ ಪ್ರಕರಣ ತನಿಖೆ ಸಹ ನಿಧಾನಗತಿಯಲ್ಲಿ ಸಾಗುತ್ತಿದೀನ್ನುವುದು ಇದರ ಇನ್ನೊಂದು ಮುಖವನ್ನು ತೋರಿಸುತ್ತದೆ.
ನೀತಿ ಸಂಹಿತೆ ಜಾರಿಗೆ ಮುನ್ನ ನಗರದ ಕೆಲವು ಪೋಲೀಸ್ ಠಾಣೆಗಳಲ್ಲಿ ದಿನಕ್ಕೆ ಐದು ಪ್ರಕರಣಗಳು ದಾಕಲಾಗುತ್ತಿದ್ದವು  ಆದರೆ ನೀತಿ ಸಂಹಿತೆಯ ಕಟ್ಟು ನಿಟ್ಟಾದ ಜಾರಿ, ಪೋಲೀಸರ ದಕ್ಷ ಕಾನೂನು ಪಾಲನೆ ಪ್ರಾರಂಭವಾದದಂದಿನ ದಿನದಿಂಡ ದಿನನಿತ್ಯ ಎರಡು ಅಥವಾ ಮೂರು ಅಪರಾಧ ಪ್ರಕರಣಗಳಷ್ಟೇ ದಾಖಲಾಗುತ್ತಿದೆ ಎಂದು ಮೂಲಗಳು ಹೇಳಿದೆ.
"ಚುನಾವಣೆ ಸಮಯವಾಗಿರುವುದರಿಂದ ರೌಡಿ ಶೀಟರ್ ಗಳ ಮೇಲೆ ಕಟ್ಟು ನಿತ್ಟಿನ ಕಣ್ಗಾವಲಿಟ್ಟಿದ್ದೇವೆ. ಅವರು ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವುದಿಲ್ಲ ಎನ್ನುವುದನ್ನು ಗಮನಿಸುತ್ತಿದ್ದೇವೆ. ಹೀಗೆ ನಾನಾ ರೀತಿಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇದರಿಂದಾಗಿ ಅಪರಾಧ ಪ್ರಕರಣ ನಿಯಂತ್ರಣಕ್ಕೆ ಬಂದಿದೆ" ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ಪ್ರಮುಖ ಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣಗೊಂಡಿರುವುದು ಅಪರಾಧಿಗಳಿಗೆ ಇನ್ನೊಂದು ಪ್ರಮುಖ ಅಡಚಣೆಯಾಗಿದೆ. ಯಾರೇನೇ ಅಪರಾಧ ಮಾಡಿದರೆ ಕೇಂದ್ರ ಮೀಸಲು ಪೋಲೀಸರು, ರಾಜ್ಯಪೋಲೀಸರು ಇರುವ ಚೆಕ್ ಪೋಸ್ಟ್ ಗಳಲ್ಲಿ ಸಿಕ್ಕಿ ಬೀಳಲಿದ್ದಾರೆ ಎಂದು ಅವರು ಹೇಳಿದರು.
ವಿಶೇಷವಾಗಿ ಇದು ಚುನಾವಣಾ ಕಾಲವಾದರೂ ಜನರಿಗೆ ಶಾಂತಿ ಮತ್ತು ಸುರಕ್ಷಿತ ಜೀವನ ಕಲ್ಪಿಸಿಕೊಡುವುದು ಪ್ರತಿ ಆರಕ್ಷಕನ  ಕರ್ತವ್ಯ. ಅದಕ್ಕಾಗಿ ಆತ ಕಾನೂನು ಪಾಲನೆಯಲ್ಲಿ ನಿರಂತರ ತೊಡಗಿರಬೇಕು, ನಿತಿ ಸಂಹಿತೆ ಇದ್ದ ಕಾರಣ , ಅಂತೆ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವುದು ನಮ್ಮ ಗುರಿ ಎಂದು ಇನ್ನೋರ್ವ ಪೋಲೀಸ್ ಅಧಿಕಾರಿ ತಿಳಿಸಿದರು.
ಇನ್ನು ಇದಾಗಲೇ ನಡೆದ ಅಪರಾಧಗಳ ತನಿಖೆ ನಿಧಾನವಾಗಿರುವುದು ಸುಳ್ಳಲ್ಲ. ಕೆಲವು ಪ್ರಕರಣಗಳು ನಿಜಕ್ಕೂ ಸೂಕ್ಷ್ಮವಾದದ್ದು. ಆದರೆ ಚುನಾವಣೆ ಮುಗಿಯುವವರೆಗೆ ತನಿಖೇಗಾಗಿ ಕಾಯುವುದು ಅನಿವಾರ್ಯ, ಅವರು ಹೇಳಿದ್ದಾರೆ.
ಸಣ್ಣ ಪುಟ್ಟ ಅಪರಾಧದಲ್ಲಿ ತೊಡಗುವವರು ಈಗ ಚುನಾವಣಾ ಕ್ಯಾಂಪೇನ್ ಗಳಲ್ಲಿ ಭಾಗವಹಿಸುತ್ತಾರೆ. ಅಲ್ಲಿ ಅವರಿಗೆ ನಿತ್ಯ 500-1,000 ರೂ. ಪಡೆಯುತ್ತಾರೆ. ಅವರ ಕೆಟ್ಟ ದುರಾಭ್ಯಾಸಗಳಿಗೆ ಇದು ಸಾಲುತ್ತದೆ. ಹೀಗಾಗಿ ಸಹ ನಗರದಲ್ಲಿ ಈ ಸಮಯ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com