ಬಾಗಲಕೋಟೆ: ಲಾರಿ ಮತ್ತು ಪೊಲೀಸ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಪೊಲೀಸರು ಮೃತಪಟ್ಟಿದ್ದಾರೆ..ಚುನಾವಣಾ ಕರ್ತವ್ಯಕ್ಕೆ ಬೆಂಗಳೂರಿನಿಂದ ಬಾಗಲಕೋಟೆಗೆ ತೆರಳುತ್ತಿದ್ದ ವೇಳೆ ಬಾಗಲಕೋಟೆಯ ಸಂಗಮ ಕ್ರಾಸ್ ಬಳಿ ಬುಧವಾರ ತಡರಾತ್ರಿ ಅಪಘಾತ ಸಂಭವಿಸಿದೆ..ಅಪಘಾತದಲ್ಲಿ ಬೆಂಗಳೂರಿನ ಸಿಐಡಿ ಡಿವೈಎಸ್ಪಿ ಬಾಳೇಗೌಡ, ಸಿಪಿಐ ಶಿವಸ್ವಾಮಿ, ಪೊಲೀಸ್ ವಾಹನ ಚಾಲಕ ವೇಣುಗೋಪಾಲ್ ಸ್ಥಳದಲ್ಲೇ ಮೃತಪಟ್ಟಿದ್ಧಾರೆ..ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಡಿವೈಎಸ್ಪಿ ಗಿರೀಶ್ ಸೇರಿದಂತೆ ಪೊಲೀಸರು ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics