ಬೆಂಗಳೂರು: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೆಲ ಮೀಟರ್ ಗಳಷ್ಟು ದೂರ ನಡೆದು ವೇದಿಕೆಗೆ ಆಗಮಿಸಿದ್ದಾರೆ!
ಮಮತಾ ಬೆಂಗಳೂರು ನಗರ ಟ್ರಾಫಿಕ್ ವ್ಯವಸ್ಥೆ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಮೂಲಗಳು ಹೇಳಿದೆ. ನಗರದ ಚಾಲುಕ್ಯ ಸರ್ಕಲ್ ನಿಂದ ವಿಧಾನಸೌಧಕ್ಕೆ ಆಗಮಿಸುವಾಗ ಉಂಟಾದ ಟ್ರಾಫಿಕ್ ಸಮಸ್ಯೆಯಿಂದಾಗಿ ಆಕೆ ವೇದಿಕೆಗೆ ನಡೆದೇ ಬರಬೇಕಾಯಿತು.
ಮಮತಾ ಬ್ಯಾನರ್ಜಿ ಮಾಜಿ ಪ್ರಧಾನಿ ದೇವೇಗೌಡರ ಎದುರು ಈ ಸಂಬಂಧ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಡಿಐಜಿ ನೀಲಮಣಿ ರಾಜು ಅವರಿಗೂ ದೂರು ಸಲ್ಲಿಸಿದ್ದಾರೆ.
#WATCH: West Bengal CM Mamata Banerjee reprimands DIG Neelamani Raju as she came to Karnataka Vidhana Soudha for oath taking ceremony because reportedly had to walk a few metres, also expressed discontentment to HD Deve Gowda & HD Kumaraswamy. #Bengalurupic.twitter.com/WZ2n0QVE9b