ಬಾರ್ ಗಳಲ್ಲಿ ಧೂಮಪಾನ ನಿರ್ಬಂಧಿಸಲು ಬಿಬಿಎಂಪಿ ನಿರಾಸಕ್ತಿ

ರೆಸ್ಟೋರೆಂಟ್, ಕೆಫೆ, ಬಾರ್ ಮತ್ತು ಪಬ್ ಗಳ ಬಳಿ ತಂಬಾಕು ನಿಷೇಧಿಸುವಂತೆ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ ಬಿಬಿಎಂಪಿಗೆ ಪತ್ರ ಬರೆದು ಮೂರು ತಿಂಗಳಾದರೂ ಸ್ಥಳೀಯ ಸಂಸ್ಥೆ ಅನುಷ್ಠಾನಗೊಳಿಸಲು ಮೀನು ಮೇಷ ಎಣಿಸುತ್ತಿದೆ.
ಕ್ಯಾನ್ಸರ್ ತಜ್ಞ ಡಾ. ವಿಶಾಲ ರಾವ್ ಚಿತ್ರ
ಕ್ಯಾನ್ಸರ್ ತಜ್ಞ ಡಾ. ವಿಶಾಲ ರಾವ್ ಚಿತ್ರ
ಬೆಂಗಳೂರು :  ರೆಸ್ಟೋರೆಂಟ್, ಕೆಫೆ, ಬಾರ್ ಮತ್ತು ಪಬ್ ಗಳ ಬಳಿ ತಂಬಾಕು ನಿಷೇಧಿಸುವಂತೆ ತಂಬಾಕು ನಿಯಂತ್ರಣ  ಉನ್ನತ ಮಟ್ಟದ ಸಮಿತಿ  ಬಿಬಿಎಂಪಿಗೆ ಪತ್ರ ಬರೆದು ಮೂರು ತಿಂಗಳಾದರೂ ಸ್ಥಳೀಯ ಸಂಸ್ಥೆ ಅನುಷ್ಠಾನಗೊಳಿಸಲು ಮೀನು ಮೇಷ ಎಣಿಸುತ್ತಿದೆ.
ಸುಮಾರು ಎರಡು ದಶಕದ ನಂತರ 2001 ರ ತಂಬಾಕು ನಿಯಂತ್ರಣ ಕಾಯ್ದ ಅನುಷ್ಠಾನಗೊಳಿಸಲು  ಸ್ಥಳೀಯ ಸಂಸ್ಥೆ ಮುಂದಾಗಿಲ್ಲ.
 ಮೇ 31 ರಂದು ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ತಂಬಾಕು ರಹಿತ ಕರ್ನಾಟಕ ಅಭಿಯಾನದಲ್ಲಿ  ಒಂದು ಮಿಲಿಯನ್ ಸಹಿ ಸಂಗ್ರಹಿಸಲಾಗುತ್ತಿದೆ.
  ರಾಜ್ಯಾದ್ಯಂತ ಬಾರ್,  ರೆಸ್ಟೋರೆಂಟ್ ಗಳನ್ನು ಧೂಮಪಾನ ಮುಕ್ತಗೊಳಿಸಲು  10 ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.  ಬೆಂಗಳೂರು ಸೇರಿದಂತೆ ಆರು ನಗರಗಳಲ್ಲಿ ಸಿಎಫ್  ಟಿಎಫ್ ಕೆ ಮೊಬೈಲ್ ಆಪ್   ಬಿಡುಗಡೆ ಮಾಡಲಾಗುತ್ತಿದೆ.  ಗೊಗಲ್  ಪ್ಲೇ ಸ್ಟೋರ್ ಮೂಲಕ ಸಾರ್ವಜನಿಕರು ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com