ಇದಕ್ಕೆ ಪ್ರತಿಕ್ರಯಿಸಿದ ನ್ಯಾಯಾಲಯ "ನಾವು ವೇತನದ ವಿತರಣೆಯಲ್ಲಿ ವಿಳಂಬವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆಯ ಉಪಸ್ಥಿತಿಗಾಗಿ ಹೆಚ್ಚುವರಿ ಸರ್ಕಾರಿ ಅಡ್ವೊಕೇಟ್ ಗೆ ಸೂಚಿಸಿದ್ದೇವೆ. ಹಿಂಬಾಕಿಯನ್ನು ಬಡ್ಡಿ ಸಹಿತ ಪಾವತಿಸಬೇಕು. ಜತೆಗೆ ಕಳೆದ 2 ತಿಂಗಳ ಪರಿಷ್ಕೃತ ವೇತನವನ್ನೂ ಬಿಡುಗಡೆಗೊಳಿಸಬೇಕು ಸರ್ಕಾರ ವೇತನ ಪಾವರ್ತಿ ಮಾಡಿರುವ ಸಂಬಂಧ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು" ಎಂದಿದೆ.