ಎಕ್ಸ್ ಪ್ರೆಸ್ ಜತೆ ಮಾತನಾಡಿದ ಮೆಟ್ರೋ ನೌಕರ ಒಕ್ಕೂಟದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿನಮ್ಮ ಬೇಡಿಕೆಗಳು ಯಾವುದೇ ರೀತಿಯಲ್ಲಿ ಈಡೇರಿಲ್ಲ, ನಾವು ಮುಷ್ಕರವನ್ನು ನಡೆಸುವುದಕ್ಕೆ ಮುಂದಾಗಿದ್ದೇವೆ.ಜೂನ್ 4 ರ ಬೆಳಿಗ್ಗೆ ಹೈಕೋರ್ಟ್ ವಿಚಾರಣೆಯು ನಿಗದಿಯಾಗಿರುವುದರಿಂದ, ವಿಚಾರಣೆಯ ಮುಗಿಯುವವರೆಗೂ ನಾವು ಕಾಯಬೇಕಾಗಿದೆ. ಎಲ್ಲಾ ವಿಭಾಗದ ಮೆಟ್ರೋ ನೌಕರರೊಡನೆ ಸಂವಹನ ನಡೆಸಲು ಸಮಯಾವಕಾಶ ಬೇಕಾಗಿರುವ ಕಾರಣ ಅಂದು ಬಿಎಂಆರ್ಸಿಎಲ್ ಮೂರನೇ ಶಿಫ್ಟ್ ನಿಂದ ನಮ್ಮ ಮುಷ್ಕರ ಮುಂದುವರಿಯುವುದು"