ಗರ್ಭಿಣಿ ಪತ್ನಿಗೆ ರಾತ್ರಿ ಇಡೀ ಸೆಕ್ಸ್‌ಗೆ ಬಲವಂತ, ನನ್ನೊಳಗಿನ ಎಲ್ಲಾ ಅಂಗಗಳು ಡ್ಯಾಮೇಜ್, ವಿಡಿಯೋ ಮಾಡಿ ನವವಿವಾಹಿತೆ ಆತ್ಮಹತ್ಯೆ!

ರಾತ್ರಿ ಇಡೀ ಸೆಕ್ಸ್‌ಗೆ ಪತಿ ಬಲವಂತಪಡಿಸುತ್ತಿದ್ದು ನನ್ನೊಳಗಿನ ಎಲ್ಲಾ ಅಂಗಗಳು ಡ್ಯಾಮೇಜ್ ಆಗಿದೆ. ಇನ್ನು ಸೆಕ್ಸ್ ಹಿಂಸೆ ತಾಳಲಾರದೆ ತಾನು ಆತ್ಮಹತ್ಯೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಹಾಸನ: ರಾತ್ರಿ ಇಡೀ ಸೆಕ್ಸ್‌ಗೆ ಪತಿ ಬಲವಂತಪಡಿಸುತ್ತಿದ್ದು ನನ್ನೊಳಗಿನ ಎಲ್ಲಾ ಅಂಗಗಳು ಡ್ಯಾಮೇಜ್ ಆಗಿದೆ. ಇನ್ನು ಸೆಕ್ಸ್ ಹಿಂಸೆ ತಾಳಲಾರದೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋ ಮಾಡಿ ಗರ್ಭೀಣಿ ಮಹಿಳೆ ನೇಹಾ ಷರೀಫ್ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. 
ಹಾಸನದ ವಿಜಯನಗರ ನಿವಾಸಿ ರೆಹಮಾನ್ ಷರೀಫ್ ಪುತ್ರಿ ನೇಹಾ ಷರೀಫ್ ಕಳೆದ 5 ತಿಂಗಳ ಹಿಂದೆ ಸಂಬಂಧಿ ಸಕಲೇಷಪುರದ ಆದಿಲ್ ಜತೆ ವಿವಾಹವಾಗಿದ್ದರು. ಎರಡು ತಿಂಗಳ ಗರ್ಭೀಣಿಯಾಗಿದ್ದ ನೇಹಾ ತನಗೆ ಪತಿ ಸೆಕ್ಸ್ ಗೆ ಬಲವಂತ ಮಾಡುತ್ತಿದ್ದು ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆಗೂ ಹೋಗಿದ್ದರು ಅಲ್ಲೂ ನ್ಯಾಯ ಸಿಗದಿದ್ದ ಕಾರಣ ಪತಿಯ ಲೈಂಗಿಕ ಮತ್ತು ಮಾನಸಿಕ ಕಿರುಕುಳಕ್ಕೆ ನೊಂದು ತಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ವಿಡಿಯೋ ಮಾಡಿ ನಂತರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ವಿಡಿಯೋದಲ್ಲಿ ನವವಿವಾಹಿತೆ ತಾನು ಮದುವೆಯಾದ ಒಂದು ವಾರದಲ್ಲಿ ಇಲ್ಲಿ ತುಂಬಾ ಚಿತ್ರಹಿಂಸೆ ನೀಡಿದರು. ನನ್ನ ಅತ್ತೆ ನನಗೆ ತುಂಬಾ ಹೊಡೆಯುತ್ತಿದ್ದರು. ನನ್ನ ಅತ್ತೆಯ ಎರಡು ಅಕ್ಕ-ತಂಗಿಯರೂ ಕೂಡ ಫೌಸಿಯಾ ಮತ್ತು ಶಾವರ್ ಎಂಬುವರು ಸೇರಿಕೊಂಡು ನುಸ್ರತ್ ಎಂಬಾಕೆಯಿಂದ ಚಿತ್ರ ವಿಚಿತ್ರ ಹಿಂಸೆ ಕೊಡಿಸಿದ್ದಾರೆ. ಇನ್ನು ನನ್ನ ಗಂಡ ರಾತ್ರಿ ಇಡೀ ಸೆಕ್ಸ್ ಗಾಗಿ ಬಲವಂತ ಮಾಡುತ್ತಿದ್ದ. ನನ್ನ ಒಳಗಿನ ಎಲ್ಲಾ ಅಂಗಗಳು ಡ್ಯಾಮೇಜ್ ಆಗಿವೆ. ಏನೂ ಉಳಿಯಲಿಲ್ಲ. ನಾನು ಗರ್ಭೀಣಿ ಎಂದು ಗೊತ್ತಿದ್ದರೂ ಕೂಡ ನನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾಳೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com