ಪೋಷಕರ ಅನುಮತಿ ಇಲ್ಲದೆ ಓಡಿಹೋಗಿ ದೇಗುಲದಲ್ಲಿ ವಿವಾಹವಾಗುವವರಿಗೆ ಶಾಕಿಂಗ್ ಸುದ್ದಿ!

ಪೋಷಕರ ಅನುಮತಿ ಇಲ್ಲದೆಯೇ ಓಡಿ ಬಂದು ವಿವಾಹವಾಗುವುದು, ಪತಿ ಅಥವಾ ಪತ್ನಿಗೆ ಹೇಳದೆಯೇ ಮತ್ತೊಂದು ವಿವಾಹವಾಗುವುದು, ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿಕೊಳ್ಳುವವರಿಗೆ ಶಾಂಕಿಂಗ್ ನ್ಯೂಸ್'ವೊಂದು ಹೊರಬಿದ್ದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಪೋಷಕರ ಅನುಮತಿ ಇಲ್ಲದೆಯೇ ಓಡಿ ಬಂದು ವಿವಾಹವಾಗುವುದು, ಪತಿ ಅಥವಾ ಪತ್ನಿಗೆ ಹೇಳದೆಯೇ ಮತ್ತೊಂದು ವಿವಾಹವಾಗುವುದು, ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿಕೊಳ್ಳುವವರಿಗೆ ಶಾಂಕಿಂಗ್ ನ್ಯೂಸ್'ವೊಂದು ಹೊರ ಬಿದ್ದಿದೆ. 
ದೇವಸ್ಥಾನಗಳಲ್ಲಿ ವಿವಾಹವನ್ನು ನಿಷಿದ್ಧ ಮಾಡುವ ಕುರಿತು ಮುಜರಾಯಿ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 
ಮದುವೆಯಲ್ಲಿ ಸಮಸ್ಯೆಗಳು ಎಡವಟ್ಟುಗಳಾದರೆ, ದೇವಸ್ಥಾನದ ಅರ್ಚಕರೇ ಸಾಕ್ಷಿಯಾಗಬೇಕಿರುವುದರಿಂದ ಸಾಕಷ್ಟು ಅರ್ಚಕರಿಗೆ ಇದರಿಂದ ಕಾನೂನು ತೊಡಕುಗಳು ಉಂಟಾಗುತ್ತಿವೆ. ಇನ್ನು ಕೆಲವರು ಅರ್ಚಕರಿಗೆ ಹೆದರಿಸಿ, ಬೆದರಿಸಿ ವಿವಾಹ ನಡೆಸುವಂತೆ ಕಿರಿಕ್ ಮಾಡುತ್ತಿದ್ದು, ಇದರಿಂದ ದೇಗುಲದಲ್ಲಿ ಮದುವೆ ನಿಷೇಧಿಸಬೇಕೆಂದು ಮುಜರಾಯಿ ಇಲಾಖೆಗೆ ಮನವಿ ಮಾಡಿದ್ದರು. 
ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಜರಾಯಿ ಇಲಾಖೆ ದೇಗುಲದ ಸುಪರ್ಧಿಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಕೂಡ ಮದುವೆಯಾಗಬೇಕಿದ್ದರೆ ಷರತ್ತುಗಳನ್ನು ವಿಧಿಸಲು ಮುಂದಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಆಗಿ 30 ದಿನಗಳ ಬಳಿ ಮದುವೆಗೆ ಅವಕಾಶ ನೀಡಲಾಗುತ್ತದೆ. ಇದರ ಜೊತೆಗೆ ನಾಮಕರಣ ಸೇರಿದಂತೆ ದೇಗುಲದಲ್ಲಿ ನಡೆಯುವ ಇತರೆ ಕಾರ್ಯಕ್ರಮಗಳಿಗೂ ಮುಜರಾಯಿ ಇಲಾಖೆ ನಿಷೇಧವನ್ನು ಹೇರಿದೆ ಎಂದು ತಿಳಿದುಬಂದಿದೆ. 
ಹಲವು ಪ್ರಕರಣಗಳಲ್ಲಿ ವಿವಾಹದ ಬಳಿಕ ಪೋಷಕರು ದೂರು ದಾಖಲಿಸುತ್ತಾರೆ. ವಿವಾಹ ನಡೆಸಿಕೊಟ್ಟ ಹಿನ್ನಲೆಯಲ್ಲಿ ಅರ್ಚಕರು ಸಾಕ್ಷಿಯೆಂದು ಪೊಲೀಸರು ಸಮನ್ಸ್ ಜಾರಿ ಮಾಡುತ್ತಾರೆ. ಇದರಿಂದ ಅರ್ಚಕರಿಗೆ ಹಾಗೂ ಇಲಾಖೆ ಮುಜುಗರವುಂಟಾಗುತ್ತಿದೆ. ಹೀಗಾಗಿ ಇಲಾಖೆ ಅಡಿಯಲ್ಲಿ ಬರುವ ದೇಗುಲಗಳಲ್ಲಿ ವಿವಾಹ ನಿಷೇಧಿಸುವ ಕುರಿತು ಚಿಂತನೆ ನಡೆಸುತ್ತಿದ್ದೇವೆಂದು ಇಲಾಖೆಯ ಅಧಿಕಾರಿಗಲು ಹೇಳಿದ್ದಾರೆ. 
ಮುಜರಾಯಿ ಸಚಿವ ರಾಜಶೇಖರ್ ಬಸವರಾಜ್ ಪಾಟೀಲ್ ಅವರು ಮಾತನಾಡಿ, ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಕೆಲ ಪ್ರಕಣಗಳಲ್ಲಿ ಯಾವುದೇ ಪರಿಶೀಲನೆಗಳಿಲ್ಲದೆಯೇ ಅಪ್ರಾಪ್ತರು ವಿವಾಹವಾಗುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಪ್ರಸ್ತುತ ನಮ್ಮ ಆಯುಕ್ತರು ರಜೆ ಮೇಲೆ ತೆರಳಿದ್ದು, ಅವರು ಬಂದ ಬಳಿಕ ಈ ಬಗ್ಗೆ ಮಾತುಕತೆ ನಡೆಸುತ್ತೇನೆ. ಚರ್ಚೆ ಬಳಿಕ ಕ್ರಮಗಳನ್ನು ಕೈಗೊಳ್ಳುತ್ತೇನೆ. ಚಿಂತನೆಗಳ ಕುರಿತಂತೆ ಪ್ರಸ್ತುತ ಯಾವುದೇ ರೀತಿಯ ಸುತ್ತೋಲೆಗಳನ್ನು ಕಳುಹಿಸಿಲ್ಲ ಎಂದು ತಿಳಿಸಿದ್ದಾರೆ. 
ಮುಜಾರಾಯಿ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗುತ್ತಿದ್ದು, ಸಮಿತಿಯ ಮೂಲಕ ದೇಗುಲದಲ್ಲಿ ಕಾರ್ಯನಿರ್ವಹಿಸುವವರಿಗೆ ಹಾಗೂ ಅರ್ಚಕರಿಗೆ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ. ಅರ್ಚಕರಿಗೆ ವೇತನ ಹೆಚ್ಚಿಸುವಂಕೆ, ಪಿಎಫ್, ಇಎಸ್ಐ ಸೌಲಭ್ಯ ಕಲ್ಪಿಸುವ ಕುರಿತು ಆಗ್ರಹಗಳು ಕೇಳಿ ಬರುತ್ತಿವೆ. ಈ ಬಗ್ಗೆ 15 ದಿನಗಳಲ್ಲಿ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com