1980ರಿಂದ 1984ರವರೆಗೂ ರಾಜ್ಯದ ರೈಲ್ವೇ ಸಚಿವರಾಗಿದ್ದ ಶರೀಫ್ ಅವರು ರಾಜ್ಯದ ರೈಲ್ವೇ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು. ತಮ್ಮ ಅವಧಿಯಲ್ಲಿ ಬೆಂಗಳೂರು ರೈಲ್ವೇ ವಿಭಾಗದ ಅಭಿವೃದ್ಧಿ, ಬೆಂಗಳೂರಿನಲ್ಲಿ ನೇಮಕಾತಿ ಮಂಡಳಿ ಸ್ಥಾಪನೆ, ಚಿತ್ರದುರ್ಗ-ರಾಯದುರ್ಗ ರೈಲ್ವೇ ಮಾರ್ಗ ನಿರ್ಮಾಣ, ಯಲಹಂಕದ ವೀಲ್ ಮತ್ತು ಆಕ್ಸೆಲ್ ಪ್ಯಾಂಟ್ ಅಭಿವೃದ್ಧಿ, ಕೋಲಾರದ ರೈಲ್ವೇ ಕೋಚ್ ತಯಾರಿಕಾ ಕಾರ್ಖಾನೆಗೆ ಮೂಲ ಸೌಕರ್ಯ, ವೈಟ್ ಫೀಲ್ಡ್ ನಲ್ಲಿ ಅಂತರಾಷ್ಟ್ರೀಯ ಕಂಟೇನರ್ ಡಿಪೋ, ಗೂಡ್ಸ್ ಟರ್ಮಿನಲ್ ಸ್ಥಾಪನೆ, ಕೆ.ಆರ್ ಪುರಂ ನಲ್ಲಿ ಡೀಸೆಲ್ ಲೋಕೊ ಶೆಟ್ ಕಾಮಗಾರಿಗೆ ಕಾರಣರಾಗಿದ್ದರು.