ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಗರದಲ್ಲಿ 165 ಹಂದಿ ಜ್ವರ ಪ್ರಕರಣ ಪತ್ತೆ: ಬಿಬಿಎಂಪಿ

ನಗರದಲ್ಲೂ ಹೆಚ್1ಎನ್1 ಪ್ರಕರಣಗಳು ಹೆಚ್ಚಾಗತೊಡಗಿದ್ದು, ಸೆಪ್ಟೆಂಬರ್ ಆರಂಭದಿಂದ ಈವರೆಗೂ ನಗರದಲ್ಲಿ ಒಟ್ಟು 165 ಪ್ರಕರಣಗಳು ಪತ್ತೆಯಾಗಿರುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ಮಾಹಿತಿ ನೀಡಿದೆ...
ಬೆಂಗಳೂರು: ನಗರದಲ್ಲೂ ಹೆಚ್1ಎನ್1 ಪ್ರಕರಣಗಳು ಹೆಚ್ಚಾಗತೊಡಗಿದ್ದು, ಸೆಪ್ಟೆಂಬರ್ ಆರಂಭದಿಂದ ಈವರೆಗೂ ನಗರದಲ್ಲಿ ಒಟ್ಟು 165 ಪ್ರಕರಣಗಳು ಪತ್ತೆಯಾಗಿರುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ಮಾಹಿತಿ ನೀಡಿದೆ. 
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಂದ ಈ ಮಾಹಿತಿ ಲಭ್ಯವಾಗಿದ್ದು, ಮಹದೇವಪುರ ವಲಯ ಒಂದರಲ್ಲಿಯೇ ಅತೀ ಹೆಚ್ಚು ಹೆಚ್1ಎನ್1 ಪ್ರಕರಣಗಳು ಬೆಳಕಿಗೆ ಬಂದಿವೆ. 
ಉಳಿದಂತೆ ಪೂರ್ವ ವಲಯದಲ್ಲಿ 22, ದಕ್ಷಿಣ ವಲಯದಲ್ಲಿ 17, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ವಲಯಗಳಲ್ಲಿ ತಲಾ 7, ಪಶ್ಚಿಮ, ಯಲಹಂಕ ವಲಯಗಳಲ್ಲಿ ತಲಾ 6 ಮತ್ತು ದಾಸರಹಳ್ಳಿ ವಲಯದಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ. ಆದರೆ, ಸಮಾಧಾನಕರ ವಿಚಾರವೆಂದರೆ, ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನಲ್ಲಿ ಗಕಂಡು ಬಂದಿರುವ ಹೆಚ್1ಎನ್1 ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಾಗಾಗಿ ನಗರದ ನಾಗರೀಕರು ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಬಿಬಿಎಂಪಿ ನಗರಲ್ಲಿರುವ 900 ಆಸ್ಪತ್ರೆಗಳಿಗೆ ಯೂನಿಟ್ ಐಟಿಗಳನ್ನು ನೀಡಿದ್ದು, ಹೆಚ್1ಎನ್1 ಪ್ರಕರಣಗಳ ಕುರಿತಂತೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಆದರೆ, ಇದರಲ್ಲಿ 500 ಆಸ್ಪತ್ರೆಗಳು ಮಾತ್ರ ವರದಿಗಳನ್ನು ನೀಡಿದೆ. ಈ ವರದಿಯನ್ನು ನಾವು ರಾಜ್ಯ ಆರೋಗ್ಯ ಇಲಾಖೆಗೆ ರವಾನಿಸಿದ್ದೇವೆಂದು ಬಿಬಿಎಂಪಿ ಯೋಜನಾ ಸಂಯೋಜಕ ಡಾ.ಶಿವಕುಮಾರ್ ಅವರು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com