ಐಟಿ ಸಿಟಿ ಬೆಂಗಳೂರಿಗೆ ಬರಲಿದೆ 'ಫೇಸ್'ಬುಕ್' ಬೃಹತ್ ಕಚೇರಿ: 2200 ಜನರಿಗೆ ಕೆಲಸ!

ದೇಶದ ಐಟಿ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಇದೇ ಮೊದಲ ಬಾರಿ ಜನಪ್ರಿಯ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ಕಾಲಿಸುತ್ತಿದ್ದು, 2.2 ಲಕ್ಷ ಚದರದಡಿ ವಿಸ್ತೀರ್ಣದ ಬೃಹತ್ ಕಚೇರಿ ಸ್ಥಾಪಿಸಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ದೇಶದ ಐಟಿ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಇದೇ ಮೊದಲ ಬಾರಿ ಜನಪ್ರಿಯ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ಕಾಲಿಸುತ್ತಿದ್ದು, 2.2 ಲಕ್ಷ ಚದರದಡಿ ವಿಸ್ತೀರ್ಣದ ಬೃಹತ್ ಕಚೇರಿ ಸ್ಥಾಪಿಸಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಬೆಂಗಳೂರಿನ ಎಂಬೆಸಿ ಗಾಲ್ಫ್ ಲಿಂಕ್ಸ್ ಸಂಕೀರ್ಣದಲ್ಲಿ 2.2 ಲಕ್ಷ ಕಚೇರಿಯನ್ನು ಸ್ಥಾಪನೆ ಮಾಡಲಿದ್ದು, ಸುಮಾರು 2,200 ಮಂದಿಗೆ ಉದ್ಯೋಗ ನೀಡುವ ನಿರೀಕ್ಷೆ ಇದೆ. 
ಇದೇ ವೇಳೆ ಫೇಸ್ ಬುಕ್ ಆಗಮನದೊಂದಿಗೆ ಜಗತ್ತಿನ ಐದು ಅತೀ ದೊಡ್ಡ ಸಾಫ್ಟ್ ವೇರ್ ತಂತ್ರಜ್ಞಾನ ಕಂಪನಿಗಳನ್ನು ಬೆಂಗಳೂರು ಹೊಂದಿದಂತಾಗಲಿದೆ. 
ಈಗಾಗಲೇ ಅಮೇಜಾನ್, ಆ್ಯಪಲ್, ಮೈಕ್ರೋಸಾಫ್ಟ್ ಹಾಗೂ ಗೂಗಲ್ ಕಂಪನಿಗಳು ಬೆಂಗಳೂರಿನಲ್ಲಿವೆ. ಐಟಿ ರಾಜಧಾನಿಗಳಲ್ಲಿ ಫೇಸ್ ಬುಕ್ 2,200 ಜನರಿಗೆ ಜನರಿಗೆ ನೌಕರಿ ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದ್ದು, ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡ ಚಲ್ಲಘಟ್ಟದ ಬಳಿಯ ಎಂಬೆಸಿ ಗಾಲ್ಫ್ ಲಿಂಕ್ಸ್ ಐಟಿ ಪಾರ್ಕ್ ಇದ್ದು, ಇದರಲ್ಲಿ ಈಗಾಗಲೇ ಐಬಿಎಂ, ಮೈಕ್ರೋಸಾಫ್ಟ್, ಗೋಲ್ಟ್ ಮ್ಯಾನ್ ಸ್ಯಾಚ್ಸ್ ಸೇರಿದಂತೆ ಅನೇಕ ಘಟಾನುಘಟಿ ಕಂಪನಿಗಳಿವೆ. ಕಂಪನಿ ಆರಂಭವಾಗಲಿರುವ ಕಟ್ಟಡಕ್ಕೆ ವರ್ಷಕ್ಕೆ ರೂ.34 ಕೋಟಿ ಬಾಡಿಗೆಯನ್ನು ಫೇಸ್ ಬುಕ್ ನೀಡಲಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com