ಬಿಬಿಎಂಪಿ ಕಾಮಗಾರಿಯಲ್ಲಿ ರೂ.1,500 ಕೋಟಿ ಅಕ್ರಮ: ಸರ್ಕಾರಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವರದಿ

ಬಿಬಿಎಂಪಿಯ ಎಲ್ಲಾ 198 ವಾರ್ಡುಗಳ ಸಿವಿಲ್ ಕಾಮಗಾರಿಯಲ್ಲಿ ರೂ.1,500 ಕೋಟಿ ಅಕ್ರಮ ನಡೆದಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ...
ಬಿಬಿಎಂಪಿ
ಬಿಬಿಎಂಪಿ
Updated on
ಬೆಂಗಳೂರು: ಬಿಬಿಎಂಪಿಯ ಎಲ್ಲಾ 198 ವಾರ್ಡುಗಳ ಸಿವಿಲ್ ಕಾಮಗಾರಿಯಲ್ಲಿ ರೂ.1,500 ಕೋಟಿ ಅಕ್ರಮ ನಡೆದಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. 
198 ವಾರ್ಡುಗಳ ಸಿವಿಲ್ ಕಾಮಗಾರಿಗಳಲ್ಲಿ 2008ರಿಂದ ನಡೆದಿರುವ ಅಕ್ರಮ, ಅವ್ಯವಹಾರಗಳ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ರಚಿಸಿದ್ದ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಗುರುವಾರ ಉಪ ಮುಖ್ಯಮಂತ್ರಿ ಪರಮೇಶವರ್ ಅವರಿಗೆ ವರದಿ ಸಲ್ಲಿಸಿತು. 
ಈ ವರದಿಯಿಂದ ಬಿಬಿಎಂಪಿ ಸಿವಿಲ್ ಕಾಮಗಾರಿಯಲ್ಲಿ ರೂ.1,500 ಕೋಟಿ ಅಕ್ರಮಗಳು ನಡೆದಿರುವುದು ಬಹಿರಂಗಗೊಂಡಿದೆ. 
ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರು ನಿನ್ನೆ ವಿಕಾಸಸೌದದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿದ್ದಾರೆ. 
ಗಾಂಧಿನಗರ, ಮಲ್ಲೇಶ್ವರ ಹಾಗೂ ರಾಜರಾಜೇಶ್ವರಿನಗರ ವಲಯದ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ಎಲ್ಲಾ 198 ವಾರ್ಡುಗಳಲ್ಲಿ 2008ರಿಂದ ನಡೆದ ಸಿವಿಲ್ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಇಲಾಖೆ, ತನಿಖೆ ಸಮಿತಿ ರಚನೆ ಮಾಡಿತ್ತು. 
ನಿವೃತ್ತ ನ್ಯಾ.ನಾಗಮೋಹನ್ ದಾಸ್ ಅಧ್ಯಕ್ಷತೆಯ ಸಮಿತಿಯಲ್ಲಿ ಸದಸ್ಯರಾಗಿ ನಿವೃತ್ತ ಪ್ರಧಾನ ಇಂಜಿನಿಯರ್ ಚಂದ್ರಶೇಖರ್, ನಿವೃತ್ತ ಮುಖ್ಯ ಇಂಜಿನಿಯರ್ ಗಳಾದ ನಟರಾಜ್ ಮತ್ತು ವೈಕುಂಠಯ್ಯ ಕಾರ್ಯನಿರ್ವಹಿಸಿದ್ದರು. 2016ರ ಅಕ್ಟೋಬರ್ ನಲ್ಲಿ ನೇಮಕಗೊಂಡಿದ್ದ ಸಮಿತಿಯು ಸತತ 2 ವರ್ಷಗಳ ಕಾಲ ಬಿಬಿಎಂಪಿಯ ಎಲ್ಲಾ ವಲಯಗಳ ಹೆಚ್ಚುವರಿ ಹಾಗೂ ಜಂಟಿ ಆಯುಕ್ತರು, ಮುಖ್ಯ ಇಂಜಿನಿಯರ್ ಗಳು ಸೇರಿದಂತೆ ಇತರೆ ಅಧಿಕಾರಿಗಳಿಂದ ತನಿಖೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ದಾಖಲೆಗಳನ್ನು ಪಡೆದುಕೊಂಡು ವರದಿ ಸಿದ್ಧಪಡಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com