ಕಲ್ಲಿದ್ದಲು ಕೊರತೆ: ಜಾಗತಿಕ ಟೆಂಡರ್ ಆಹ್ವಾನಿಸಲು ಕೆಪಿಸಿಎಲ್ ಮುಂದು

ಮುಂದಿನ ಬೇಸಿಗೆಯಲ್ಲಿ ರಾಜ್ಯ ಎದುರಿಸಲಿರುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಕಲ್ಲಿದ್ದಲು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಚೂರು: ಮುಂದಿನ ಬೇಸಿಗೆಯಲ್ಲಿ ರಾಜ್ಯ ಎದುರಿಸಲಿರುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಕಲ್ಲಿದ್ದಲು ಖರೀದಿಗೆ ಜಾಗತಿಕ ಟೆಂಡರ್ ಕರೆಯಲು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್) ಮುಂದಾಗಿದೆ.

ಕಲ್ಲಿದ್ದಲಿನ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರ ಕಲ್ಲಿದ್ದಲು ಸಂಗ್ರಹ ಸದ್ಯ ಬಂದಿರುವುದರಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಆದರೆ ದೇಶಾದ್ಯಂತ  ಬೇಸಿಗೆಯಲ್ಲಿ ಕಲ್ಲಿದ್ದಲು ಕೊರತೆ ಉಂಟಾಗುವ ಸಾಧ್ಯತೆಯಿದ್ದು ಬೇಸಿಗೆಯಲ್ಲಿ ವಿದ್ಯುತ್ ಕೊರತೆಯುಂಟಾಗುವ ಸಾಧ್ಯತೆಯಿದೆ.

ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಿ ಕುಮಾರ್ ನಾಯಕ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಬೇಸಿಗೆ ಆರಂಭವಾಗುವುದಕ್ಕೆ ಮೊದಲು ಕೆಪಿಸಿಎಲ್ ಜಾಗತಿಕ ಟೆಂಡರ್ ಕರೆಯಲಿದ್ದು ಆ ಮೂಲಕ 5 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಖರೀದಿಸಲಾಗುವುದು. ವಿದೇಶಿ ಕಂಪೆನಿಗಳ ಕಲ್ಲಿದ್ದಲನ್ನು ಭಾರತೀಯ ಕಲ್ಲಿದ್ದಲು ಕಂಪೆನಿಗಳ ಕಲ್ಲಿದ್ದಲು ಜೊತೆ ಮಿಶ್ರಣ ಮಾಡಲಿದ್ದು ಅದು ಸರ್ಕಾರದ ಥರ್ಮಲ್ ಇಂಧನ ಘಟಕಗಳಲ್ಲಿ ಬಳಸಲಾಗುವುದು ಎಂದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕಲ್ಲಿದ್ದಲು ಸಚಿವಾಲಯಕ್ಕೆ ಪತ್ರ ಬರೆದಿದ್ದು, ಕಲ್ಲಿದ್ದಲು ಸಮಸ್ಯೆಯನ್ನು ಬಗೆಹರಿಸುವಂತೆ ಮುಖ್ಯಮಂತ್ರಿಗಳು ಕೂಡ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದಾರೆ. ಇದರಿಂದಾಗಿ ಕಲ್ಲಿದ್ದಲಿನ ಪೂರೈಕೆ ಸ್ವಲ್ಪ ಹೆಚ್ಚಾಗಿದೆ. ಪರಿಸ್ಥಿತಿ ದಿನದಿಂದ ದಿನಕ್ಕೆ ಉತ್ತಮವಾಗುವ ಸಾಧ್ಯತೆಯಿದ್ದು ಇನ್ನು ಕೆಲ ದಿನಗಳಲ್ಲಿ ಹೆಚ್ಚು ಕಲ್ಲಿದ್ದಲು ಪೂರೈಕೆಯಾಗಿ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com