ಮೆಜೆಸ್ಟಿಕ್'ನಲ್ಲಿ ಕೆಎಸ್ಆರ್'ಟಿಸಿ ಬಸ್ ನಿಲ್ದಾಣದ ಹೊಸ ಟರ್ಮಿನಲ್: ಪ್ರಯಾಣಿಕರಿಗೆ ನಿರಾಳ

ಮೆಜೆಸ್ಟಿಕ್ ನಲ್ಲಿ ನೂತನ ಕೆಎಸ್ಆರ್'ಟಿಸ್ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದು, ಸೆ.16ರಿಂದ ತನ್ನ ಕಾರ್ಯವನ್ನು ಆರಂಭಿಸಲಿದೆ. ನೂತನ ನಿಲ್ದಾಣ ನಿರ್ಮಾಣಗೊಂಡಿರುವ ಹಿನ್ನಲೆಯಲ್ಲಿ ನಿಲ್ಲಲು ಸೂಕ್ತ ಸ್ಥಳಗಳಿಲ್ಲದೆ ಬ್ಯಾಗ್ ಗಳನ್ನು ಹೊತ್ತುಕೊಂಡು...
ಮೆಜೆಸ್ಟಿಕ್'ನಲ್ಲಿ ತಲೆ ಎತ್ತಿದ ನೂತನ ಕೆಎಸ್ಆರ್'ಟಿಸಿ ಬಸ್ ನಿಲ್ದಾಣ: ಪ್ರಯಾಣಿಕರಿಗೆ ನಿರಾಳ
ಮೆಜೆಸ್ಟಿಕ್'ನಲ್ಲಿ ತಲೆ ಎತ್ತಿದ ನೂತನ ಕೆಎಸ್ಆರ್'ಟಿಸಿ ಬಸ್ ನಿಲ್ದಾಣ: ಪ್ರಯಾಣಿಕರಿಗೆ ನಿರಾಳ
Updated on: 
ಬೆಂಗಳೂರು: ಮೆಜೆಸ್ಟಿಕ್ ನಲ್ಲಿ ನೂತನ ಕೆಎಸ್ಆರ್'ಟಿಸ್ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದು, ಸೆ.16ರಿಂದ ತನ್ನ ಕಾರ್ಯವನ್ನು ಆರಂಭಿಸಲಿದೆ. ನೂತನ ನಿಲ್ದಾಣ ನಿರ್ಮಾಣಗೊಂಡಿರುವ ಹಿನ್ನಲೆಯಲ್ಲಿ ನಿಲ್ಲಲು ಸೂಕ್ತ ಸ್ಥಳಗಳಿಲ್ಲದೆ ಬ್ಯಾಗ್ ಗಳನ್ನು ಹೊತ್ತುಕೊಂಡು ಎಲ್ಲೆಂದರಲ್ಲಿ ನಿಂತು ಪರದಾಡುತ್ತಿದ್ದ ಪ್ರಯಾಣಿಕರಿಗೆ ಕೊಂಚ ನಿರಾಳವನ್ನು ನೀಡಲಿದೆ. 
ನೂತನ ಕೆಎಸ್ಆರ್'ಟಿಸಿ ಬಸ್ ನಿಲ್ದಾಣ ಕೆಂಪೇಗೌಡ ಮೆಟ್ರೋ ನಿಲ್ದಾಣದ ಬಳಿ ನಿರ್ಮಾಣಗೊಂಡಿದ್ದು, ಸೆಪ್ಟೆಂಬರ್ 16ರಿಂದ ನಿಲ್ದಾಣದಿಂದ 480 ಬಸ್ ಗಳು ಎಂದಿನಂತೆ ತನ್ನ ಕಾರ್ಯಗಳನ್ನು ಆರಂಭಿಸಲಿವೆ. ನೂತನ ಬಸ್ ನಿಲ್ದಾಣದಿಂದ ಪ್ರತೀನಿತ್ಯ ಪ್ರಯಾಣ ಬೆಳೆಸುವ 20,000 ಪ್ರಯಾಣಿಕರಿಗೆ ಅನುಕೂಲವಾಗಲಿದೆ. 
ಮಡಿಕೇರಿ, ಕಾಸರಗೋಡು, ಭಟ್ಕಳ, ಉಡುಪಿ, ಮಣಿಪಾಲ್, ಧರ್ಮಸ್ಥಳ, ಪುತ್ತೂರು, ಶೃಂಗೇರಿ, ಹೊರನಾಟು, ಹಾಸನ, ಚಿಕ್ಕಮಗಳೂರು, ಮಂಗಳೂರು, ಮುರುಡೇಶ್ವರ, ಕುಂದಾಪುರ ಮತ್ತು ಹೊಳೆನರಸೀಪುರಕ್ಕೆ ಇದೇ ಬಸ್ ನಿಲ್ದಾಣದಿಂದ ಒಟ್ಟು 23 ಬಸ್ ಗಳು ಪ್ರತೀನಿತ್ಯ ಸಂಚಾರ ಆರಂಭಿಸಲಿವೆ. ಮಂಗಳೂರಿಗೆ ಹೋಗುವ 60 ಬಸ್ ಗಳೂ ಕೂಡ ಇದೇ ನಿಲ್ದಾಣದಿಂದ ಸಂಚಾರ ಆರಂಭಿಸಲಿವೆ ಎಂದು ಕೆಎಸ್ಆರ್'ಟಿಸಿ ಅಧಿಕಾರಿಗಳು ಹೇಳಿದ್ದಾರೆ. 
ಪ್ರಸ್ತುತ 3 ನಿಲ್ದಾಣಗಳಿದ್ದು, ನೂತನ ಬಸ್ ನಿಲ್ದಾಣ ಪ್ರಯಾಣಿಕರಿಗೆ ಕೊಂಚ ನಿರಾಳವನ್ನು ನೀಡಲಿದೆ. ಟರ್ಮಿನಲ್ 2ರಲ್ಲಿ ಒಟ್ಟು 1,046 ಬಸ್ ಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 424 ಬಸ್ ಗಳನ್ನು ತೆಗೆದು ಹಾಕಿ ನೂತನ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸುವಂತೆ ಮಾಡಲಾಗುತ್ತದೆ. ಟರ್ಮಿನಲ್ 1 ರಲ್ಲಿ 742 ಬಸ್ ಗಳು ಸಂಚಾರ ನಡೆಸುತ್ತಿದ್ದು, ಇದರಲ್ಲಿ 56 ಬಸ್ ಗಳನ್ನು ನೂತನ ಬಸ್ ನಿಲ್ದಾಣಕ್ಕೆ ಹಾಕಲಾಗುತ್ತದೆ. ಸ್ಥಳ ಕಿರಿದಾದ್ದರಿಂದ ಬಸ್ ಗಳನ್ನು ತಿರುಗಿಸಿಕೊಳ್ಳಲು ಚಾಲಕರು ಪರದಾಡುತ್ತಿದ್ದರು. ಹೀಗಾಗಿ ನಿಲ್ದಾಣದಲ್ಲಿ ಸದಾಕಾಲ ಸಂಚಾರ ದಟ್ಟಣೆ ಇರುತ್ತಿತ್ತು. ನೂತನ ನಿಲ್ದಾಣ ಕೊಂಚ ನಿರಾಳವನ್ನು ನೀಡಲಿದೆ ಎಂದು ತಿಳಿಸಿದ್ದಾರೆ. 
ಟರ್ಮಿನಲ್ 2 ವಿಸ್ತರಣೆ ಮಾಡಲಾಗುತ್ತಿದ್ದು, ಭೂಮಿಯನ್ನು ಬಿಎಂಆರ್'ಸಿಎಲ್'ಗೆ 5 ವರ್ಷಗಳ ಕಾಲ ನೀಡಲಾಗಿದೆ. 5 ತಿಂಗಳ ಹಿಂದಷ್ಟೇ 1 ಎಕರೆ ಭೂಮಿಯನ್ನು ಹಿಂದಕ್ಕೆ ನೀಡಿದ್ದರು. ನಿಲ್ದಾಣ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ. 
ಎಲ್ಲಾ ರೀತಿಯ ಮೂಲಭೂತ ಸೌಕರ್ಯ ವ್ಯವಸ್ಥೆಗಳನ್ನು ನಿಲ್ದಾಣದಲ್ಲಿ ಕಲ್ಪಿಸಲಾಗಿದೆ. ವಾರಗಳ ಹಿಂದಷ್ಟೇ ಕೆಲ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಮೆಟ್ರೋ ನಿಲ್ದಾಣಗಳಿಗೆ ಹಾಕಿದಂತೆಯೇ ಗ್ರಾನೈಟ್ ಗಳನ್ನು ಹಾಕಲಾಗುತ್ತಿದೆ ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com