ಬೆಂಗಳೂರು: ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ, ಉದ್ಯಮಿಗಳಿಬ್ಬರ ದುರ್ಮರಣ!

ನಿಲ್ಲಿಸಿದ್ದ ಟ್ರಕ್‌ಗೆ ವೇಗವಾಗಿ ಬಂದ ಆಡಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮಾಜಿ ಸಿಎಂ, ದಿವಂಗತ ಜಯಲಲಿತಾರ ಅಕ್ರಮ ಆಸ್ತಿ ಪ್ರಕರಣದ ವಿರುದ್ಧ ವಾದಿಸಿದ್ದ ಸರ್ಕಾರಿ ವಕೀಲರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ನಿಲ್ಲಿಸಿದ್ದ ಟ್ರಕ್‌ಗೆ ವೇಗವಾಗಿ ಬಂದ ಆಡಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮಾಜಿ ಸಿಎಂ, ದಿವಂಗತ ಜಯಲಲಿತಾರ ಅಕ್ರಮ ಆಸ್ತಿ ಪ್ರಕರಣದ ವಿರುದ್ಧ ವಾದಿಸಿದ್ದ ಸರ್ಕಾರಿ ವಕೀಲರ ಪುತ್ರ ಸೇರಿದಂತೆ ಉದ್ಯಮಿಗಳಿಬ್ಬರು ಸಾವನ್ನಪ್ಪಿದ್ದು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಆವಲಹಳ್ಳಿಯಲ್ಲಿ ನಡೆದಿದೆ. 
ಕೋಲಾರ ಬೆಂಗಳೂರು ಹೆದ್ದಾರಿಯ ಹೊಸಕೋಟೆಯ ಆವಲಹಳ್ಳಿಯ ಬಳಿ ಟ್ರಕ್‌ ಅನ್ನು ನಿಲ್ಲಿಸಲಾಗಿತ್ತು. ವೇಗವಾಗಿ ಬಂದ ಆಡಿ ಕಾರು ಮೊದಲಿಗೆ ಬೈಕ್ ಗೆ ಡಿಕ್ಕಿ ಹೊಡೆದು ನಂತರ ಟ್ರಕ್‌ಗೆ ಗೆ ಗುದ್ದಿದ್ದು ಪರಿಣಾಮ ಸರ್ಕಾರಿ ವಕೀಲ ಭವಾನಿ ಸಿಂಗ್ ರ ಪುತ್ರ 26 ವರ್ಷದ ಅಮರನಾಥ್ ಸಿಂಗ್ ಹಾಗೂ 29 ವರ್ಷದ ಸುಬೇಂದ್ರ ಬೆಜ್ ಮೃತಪಟ್ಟಿದ್ದು ಅಮರನಾಥ್ ಸ್ನೇಹಿತ ಜಸ್ವಂತ್ ಸಿಂಗ್ ಹಾಗೂ ಬೈಕ್ ಸವಾರ ಮಂಜುನಾಥ್ ಗಂಭೀರವಾಗಿ ಗಾಯಗೊಂಡಿದ್ದಾರೆ. 
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಟ್ರಕ್ ನ ಚಾಲಕ ಟ್ರಕ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. 
ಕಳೆದ ರಾತ್ರಿ 9.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಮರನಾಥ್ ಸಿಂಗ್ ಹಾಗೂ ಸ್ನೇಹಿತರು ಆಡಿ ಕಾರಿನಲ್ಲಿ ಕೋಲಾರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಇನ್ನು ಅಮರನಾಥ್ ಹಾಗೂ ಸ್ನೇಹಿತರು ಚಾಲನೆ ವೇಳೆ ಮದ್ಯಪಾನ ಮಾಡಿದ್ದರೆ ಎಂದು ತಿಳಿಯಲು ವೈದ್ಯಕೀಯ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com