ಕಾಂಗ್ರೆಸ್ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆಂಬ ಊಹಾಪೋಹಗಳ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ನಾವಂತೂ ಕಾಂಗ್ರೆಸ್ ಪಕ್ಷ ಬಿಡುವ ಮಾತಿಲ್ಲ. ಬೇರೆ ಶಾಸಕರು ಪಕ್ಷ ತೊರೆದರೆ ನಮಗೇನು ಗೊತ್ತು? ಎಂದು ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆಯನ್ನು ದೃಶ್ಯ ಮಾಧ್ಯಮಗಳು ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಸೂಚನೆ ಎಂದೇ ಬಿಂಬಿಸುತ್ತಿವೆ.