2007ರಲ್ಲಿ ಬೆಂಗಳೂರು ದಕ್ಷಿಣದ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಿಯಾಂಕ ಗುಪ್ತಾ ಮತ್ತು ಲಖನೌ ಮೂಲದ ಸತೀಶ್ ಕುಮಾರ್ ಗುಪ್ತ ಮದುವೆಯಾಗಿದ್ದರು. ಗುಪ್ತಾ ಇನ್‌ಪೋಸಿಸ್‌ನಲ್ಲಿ ಎಚ್‌ಆರ್ ಮ್ಯಾನೇಜರ್ ಆಗಿದ್ದರು. ಮದುವೆ ನಂತರ ಶಾಂತಿನಗರದ ಸತೀಶ್ ಮನೆಯಲ್ಲಿ ಇಬ್ಬರೂ ವಾಸಿಸುತ್ತಿದ್ದರು. ಆದರೆ, ಸತೀಶ್ ಅವರ ಪೋಷಕರೊಂದಿಗೆ ಹೊಂದಾಣಿಕೆಯಾಗದ ಹಿನ್ನಲೆಯಲ್ಲಿ ಪ್ರಿಯಾಂಕ ಜೆಪಿನಗರ 8ನೇ ಹಂತದ ವೆಂಕಟೇಶ್ವರ ಲೇಔಟ್‌ನಲ್ಲಿ ವಾಸಿಸುತ್ತಿದ್ದರು. 2010ರ ಆ. 8ರಂದು ಮನೆಯಲ್ಲಿ ಪ್ರಿಯಾಂಕ ಕೊಲೆಯಾಗಿದ್ದರು. ಗಂಡ ಹೆಂಡತಿ ನಡುವೆ ಸಾಮರಸ್ಯ ಇರಲಿಲ್ಲ. ಪ್ರಿಯಾಂಕ ಗಂಡನನ್ನು ತುಚ್ಛವಾಗಿ ನೋಡಿ, ಅವಮಾನ ಮಾಡುತ್ತಿದ್ದಳು, ಸತೀಶ್ ಪೋಷಕರನ್ನು ಹೀಗಳೆಯುತ್ತಿದ್ದರು ಎನ್ನಲಾಗಿದೆ. ಇದರಿಂದ ರೋಸಿಹೋಗಿದ್ದ ಸತೀಶ್, ಪ್ಲಾನ್ ಮಾಡಿ ಜಾಣತನದಿಂದ ಪ್ರಿಯಾಂಕಾ ಹತ್ಯೆ ಮಾಡಿದ್ದ.