ಇಲ್ಲಿಯವರೆಗೆ ದಾಖಲಾಗಿರುವ ಒಟ್ಟು ಸೈಬರ್ ಅಪರಾಧ ಪ್ರಕರಣಗಳು 11,000, ಅದರಲ್ಲಿ 9,000 ಪ್ರಕರಣಗಳು ಸ್ತೇಷನ್ ಮಟ್ಟದಲ್ಲೇ ಬಾಕಿ ಉಳಿದಿವೆ. ಇದರಲ್ಲಿ ಸುಮಾರು 8,000 ಪ್ರಕರಣಗಳಲ್ಲಿ ವಿದ್ಯಾರ್ಥಿಗಳೇ ಬಲಿಪಶುಗಳಾಗಿದ್ದಾರೆ. ಪೊಲೀಸರ ಪ್ರಕಾರ, ಹೆಚ್ಚು ಟೆಕ್ನಾಲಜಿ ಬಗ್ಗೆ ತಿಳಿದಿರುವ ಜನರು ಆನ್ ಲೈನ್ ನಲ್ಲಿ ಮೋಸಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.ಮುಖ್ಯವಾಗಿ ಅವರು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ದುಷ್ಕರ್ಮಿಗಳು ಹಣವನ್ನು ನೀಡುವಂತೆ ಜನರನ್ನು ಮೋಸಗೊಳಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. "ನೀವುಗಳೆಂದಿಗೂ ನಿಮ್ಮ ಒಂದು ಬಾರಿ ಬಳಸಬಹುದಾದ ಪಾಸ್ ವರ್ಡ್ (ಒಟಿಪಿ)ಯನ್ನು ಯಾರೊಬ್ಬರೊಡನೆ ಹಂಚಿಕೊಳ್ಲಬೇಡಿ ಎಂದು ಎಲ್ಲೆಡೆ ಸಲಹೆ ನಿಡುತ್ತೇವೆ.ಆದರೆ ಜನರು ಜಾಗೃತರಾಗುತ್ತಿಲ್ಲ. ಉದಾಹರಣೆಗೆ ನೀವು ಏರ್ಲೈನ್ ಅಥವಾ ರೈಲು ಟಿಕೆಟ್ ಅನ್ನು ಬುಕ್ ಮಾಡಲು / ರದ್ದುಗೊಳಿಸಲು ಬಯಸಿದರೆ, ಗ್ರಾಹಕ ಸೇವಾ ಕೇಂದ್ರಗಳಿಗೆ ಸಂಪರ್ಕಿಸಲು ವೆಬ್ ಸೈಟ್ ಗೆ ತೆರಳಬೇಕು. ಆದರೆ ಜನರು ಆನ್ ಲೈನ್ ಮೂಲಕ ಅಪರಿಚಿತರೊಡನೆ ತಮ್ಮ ಮಾಹಿತಿ ಹಂಚಿಕೊಳ್ಳುತ್ತಾರೆ,, ಆಗ ಅವರ ಖಾತೆಯಿಂದ ಹಣವನ್ನು ಅಪಘರಿಸುವುದು ಆನ್ ಲೈನ್ ಕಳ್ಳರಿಗೆ ಸುಲಭವಾಗಿದೆ" ಚಂದ್ರಪ್ಪ ಹೇಳಿದ್ದಾರೆ.