ಮಾಗಡಿ: ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರೇಷ್ಮೆ ನಗರ ರಾಮನಗರ ರಾಜ್ಯಕ್ಕೆ ಎರಡನೇ ಸ್ಥಾನ ಪಡೆಯುುವ ಮೂಲಕ ಅದ್ವಿತೀಯ ಸಾಧನೆ ಮಾಡಿದೆ.
ನಾಡಪ್ರಭು ಕೆಂಪೇಗೌಡರ ತವರು ಮಾಗಡಿಯ ವಾಸವಿ ವಿದ್ಯಾನಿಕೇತನ್ ಶಾಲೆಯ ಚೈತ್ಯನ್ಯ ಗೌಡ ಎಂ.ಜಿ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 19 ಮಂದಿ 623 ಅಂಕಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ ಚೈತನ್ಯ ಗೌಡ ಕೂಡಾ ಒಬ್ಬರಾಗಿದ್ದಾರೆ.
ಗೋಪಾಲಗೌಡ ಹಾಗೂ ಎಸ್.ಎನ್. ರವಿಕಲಾ ದಂಪತಿಯ ಪುತ್ರಿಯಾದ ಚೈತನ್ಯಗೌಡ ಕನ್ನಡದಲ್ಲಿ 124, ಇಂಗ್ಲೀಷ್ ನಲ್ಲಿ 100, ಹಿಂದಿ 99, ಗಣಿತ 100, ವಿಜ್ಞಾನ 100 ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕ ಗಳಿಸುವ ಮೂಲಕ ನಾಡಪ್ರಭು ಕೆಂಪೇಗೌಡ ಅವರ ಊರಿಗೆ ಕೀರ್ತಿ ತಂದಿದ್ದಾರೆ.