ಹಂಪಿ ಸಮೀಪ ನಡುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡಿರುವವರಲ್ಲಿ 19 ಮಂದಿ ವಿದೇಶಿಯರು

ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಪಾರಂಪರಿಕ ತಾಣ ಹಂಪಿಯ ಸಮೀಪ ಮುಳುಗಿ ಹೋಗಿರುವ ನಡುಗಡ್ಡೆಯಲ್ಲಿ 19 ಮಂದಿ ವಿದೇಶಿಯರು ಸೇರಿದಂತೆ ಅನೇಕರು ಸಿಲುಕಿಹಾಕಿಕೊಂಡಿದ್ದಾರೆ. 
ಹಂಪಿ ಸಮೀಪ ನಡುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡಿರುವವರಲ್ಲಿ 19 ಮಂದಿ ವಿದೇಶಿಯರು
Updated on: 

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಪಾರಂಪರಿಕ ತಾಣ ಹಂಪಿಯ ಸಮೀಪ ಮುಳುಗಿ ಹೋಗಿರುವ ನಡುಗಡ್ಡೆಯಲ್ಲಿ 19 ಮಂದಿ ವಿದೇಶಿಯರು ಸೇರಿದಂತೆ ಅನೇಕರು ಸಿಲುಕಿಹಾಕಿಕೊಂಡಿದ್ದಾರೆ.
ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್ ಡಿಆರ್ ಎಫ್) ಈಗಾಗಲೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.


ಆನೆಗುಂಡಿಯಿಂದ 7 ಕಿಲೋ ಮೀಟರ್ ದೂರದಲ್ಲಿ ವಿರುಪಾಪುರ ಗಡ್ಡಿಯಲ್ಲಿ ಎನ್ ಡಿಆರ್ ಎಫ್ ತಂಡ ದೋಣಿಯ ಮೂಲಕ ಸಾಗಿ ಅಪಾಯದಲ್ಲಿರುವವರನ್ನು ಕಾಪಾಡಬೇಕಾಗಿದ್ದು, ಇಂದು ಸಂಜೆಯೊಳಗೆ ರಕ್ಷಣಾ ಕಾರ್ಯ ಮುಗಿಯಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಅಲ್ಲಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಾ ಬಂದಿದ್ದು ರಕ್ಷಣಾ ಕಾರ್ಯ ಸುಲಭವಾಗಬಹುದು ಎಂದು ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com