ಚಿಕಮಗಳೂರು: ಕಿಡಿಗೇಡಿಗಳಿಂದ ಐದು ಬೈಕ್‌ಗಳಿಗೆ ಬೆಂಕಿ

ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಅಪರಿಚಿತ ದುಷ್ಕರ್ಮಿಗಳು ಐದು ಬೈಕ್‌ಗಳಿಗೆ ಬೆಂಕಿ ಹಚ್ಚಿದ ನಂತರ ಆತಂಕದ ಪರಿಸ್ಥಿತಿ ಉಂಟಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಚಿಕಮಗಳೂರು: ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಅಪರಿಚಿತ ದುಷ್ಕರ್ಮಿಗಳು ಐದು ಬೈಕ್‌ಗಳಿಗೆ ಬೆಂಕಿ ಹಚ್ಚಿದ ನಂತರ ಆತಂಕದ ಪರಿಸ್ಥಿತಿ ಉಂಟಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಪೆನ್ಷನ್ ಮೊಹಲ್ಲಾ, ಮಾರ್ಕೆಟ್ ರಸ್ತೆ ಮತ್ತು ಗೌರಿ ಕಾಲೋನಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೆ ಸೋಮವಾರ ಬೆಂಕಿ ಹಚ್ಚಲಾಗಿದೆ. ಘಟನೆಯ ನಂತರ, ಪೊಲೀಸರು ಗಸ್ತು ತಿರುಗಿದ್ದು, ಎಸ್‌ಪಿ ಹರೀಶ್ ಪಾಂಡೆ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿದರು. ಮೂರು ಕಡೆಯೂ ಒಬ್ಬನೇ ವ್ಯಕ್ತಿಯಿಂದ ಕಿಡಿಗೇಡಿತನ ನಡೆದಿರುವಂತೆ ಕಾಣುತ್ತಿದೆ ಎಂದು  ಪಾಂಡೆ ಹೇಳಿದರು.

ಒಬ್ಬನೇ ವ್ಯಕ್ತಿ ಮೂರು ಪ್ರದೇಶಗಳಿಗೆ ಹೋಗಿ ಬೆಂಕಿ ಹಚ್ಚಿದ್ದಾನೆ. ಇದು ಕಿಡಿಗೇಡಿತನದ ಕೃತ್ಯವೆಂದು ತೋರುತ್ತದೆ, ಅದಕ್ಕಿಂತ ಹೆಚ್ಚೇನೂ ಇಲ್ಲ” ಎಂದರು. ಕೆಲವು ಪ್ರದೇಶಗಳಿಂದ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿ ದೊರೆತಿದ್ದು, ಆರೋಪಿಗಳನ್ನು ಗುರುತಿಸಲು ಅವುಗಳನ್ನು ವಿಶ್ಲೇಷಿಸಲಾಗುತ್ತಿದೆ. ಆರೋಪಿಗಳು ಮುಖ್ಯ ಬೀದಿಗಳನ್ನು ತಪ್ಪಿಸಿದ್ದಾರೆ. ಆದರೆ ವಸತಿ ಪ್ರದೇಶಗಳ ಕಿರಿದಾದ ರಸ್ತೆಗಳಲ್ಲಿ ನಿಲುಗಡೆ ಮಾಡಿದ ಬೈಕುಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ನಾವು ಶೀಘ್ರದಲ್ಲೇ ಅವರನ್ನು ಗುರುತಿಸುತ್ತೇವೆ, ” ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com