ಈ ಆಡಿಯೋ ಟೇಪ್ ಬಗ್ಗೆ ರಮೇಶ್ ಕುಮಾರ್ ಬಜೆಟ್ ಮುಕ್ತಾಯಗೊಂಡ ಬಳಿಕ ಪ್ರತಿಕ್ರಿಯೆ ನೀಡಿದ್ದು ಯಡಿಯೂರಪ್ಪ ಸ್ಪೀಕರ್ ಹಾಗೂ ಜಡ್ಜ್ ಗೆ ಸಂಬಂಧಿಸಿದಂತೆ ಆ ಮಾತು ಹೇಳಿಲ್ಲ. ನಾನು ಸಂಪೂರ್ಣವಾಗಿ ಆಡಿಯೋ ಕೇಳಿದ ಬಳಿಕವೇ ಪ್ರತಿಕ್ರಿಯೆ ನೀಡುತ್ತಿದ್ದೇನೆ. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿಗಳಾಗಿದ್ದವರು, ಅವರು ಸ್ಪೀಕರ್ ಹಾಗೂ ನ್ಯಾಯಾಧೀಶರ ಬಗ್ಗೆ ಆ ಮಾತು ಹೇಳಿಲ್ಲ. ಆಡಿಯೋದಲ್ಲಿ ಯಾರು ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.