ಪತ್ನಿ ಪೀಡಕ ರೌಡಿ ಪತಿ: ಹೆಂಡತಿ ಮತ್ತು ನಾದಿನಿಯಿಂದ ಹಿಗ್ಗಾಮುಗ್ಗಾ ಥಳಿತ

ಪತಿಯಿಂದ ದೂರವಿದ್ದ ಪತ್ನಿಯನ್ನು ವಾಪಸ್ ಕರೆದುಕೊಂಡು ಬರಲು ಹೋದ ಗಂಡನಿಗೆ, ಹೆಂಡತಿ ಮತ್ತು ನಾದಿನಿ ಹಿಗ್ಗಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಪತಿಯಿಂದ ದೂರವಿದ್ದ ಪತ್ನಿಯನ್ನು ವಾಪಸ್ ಕರೆದುಕೊಂಡು ಬರಲು ಹೋದ ಗಂಡನಿಗೆ, ಹೆಂಡತಿ ಮತ್ತು ನಾದಿನಿ ಹಿಗ್ಗಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗೌಯಗೊಂಡ ರೌಡಿ . ಪ್ರವೀಣ್ ಕುಮಾರ್  ನನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 2 ತಿಂಗಳ ಹಿಂದೆ ಪ್ರವೀಣ್ ಕುಮಾರ್ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಾಗಿತ್ತು,  ಹಲವು ದಿನಗಳಿಂದ ತನ್ನ ಹೆಂಡತಿಯನ್ನು  ವಾಪಸ್ ಕರೆದುಕೊಂಡು ಬರಲು ಪ್ರಯತ್ನ ನಡೆಸಿದ್ದ,
ಪ್ರವೀಣ್ ಪತ್ನಿ ಸುಮತಿ ನಡುವೆ ಜಗಳ ನಡೆದು ಬ್ಯಾಟರಾಯನಪುರ ಠಾಣೆಯಲ್ಲಿ  ಪ್ರವೀಣ್ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದರು.  ಅದಾದ ನಂತರ ಆಕೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಆದರೆ ಪ್ರವೀಣ್ ವಾಪಸ್ ಬರುವಂತೆ ಪತ್ನಿಗೆ ಒತ್ತಾಯಿಸುತ್ತಿದ್ದ.
ಸೋಮವಾರ ಜಗಜೀವನ್ ರಾಮ್ ನಗರದಲ್ಲಿದ್ದ ತನ್ನ ಪತ್ನಿಯ ಮನೆಗೆ ತೆರಳಿದ್ದ ಪ್ರವೀಣ್, ವಾಪಸ್ ಮನೆಗೆ ಬರುವಂತೆ ಮನವಿ ಮಾಡಿದ್ದ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ, ಈ ವೇಳೆ ಜಗಳ ಬಿಡಿಸಲು ಮಧ್ಯ ಆಗಮಿಸಿದ ನಾದಿನಿ ಕೆನ್ನೆಗೆ ಪ್ರವೀಣ್ ಬಾರಿಸಿದ್ದಾನೆ, ಇದರಿಂದ ಕೋಪಗೊಂಡ ಅಕ್ಕ ತಂಗಿಯರು ಸೇರಿ ರಾಯಪ್ಪುರಂ ನಿವಾಸಿಯಾದ ಪ್ರವೀಣ್ ಮೆಲೆ ಹಲ್ಲೆ ನಡೆಸಿದ್ದಾರೆ,
ಶಶಿಕಲಾ ಅಡುಗೆ ಮನೆಗೆ ತೆರಳಿ ಕಾರದಪುಡಿ ತಂದು ಎರಚಿದ್ದಾಳೆ, ನಂತರ ಪತ್ನಿ ಸುಮತಿ ಮರದ ಕೋಲು ತಂದು ಪ್ರವೀಣ್ ಕಾಲು ಹಾಗೂ ತಲೆಯ ಮೇಲೆ ಬಾರಿಸಿದ್ದಾಳೆ. ಗಲಾಟೆ ಕೇಳಿಸಿಕೊಂಡು ಬಂದ ಅಕ್ಕಪಕ್ಕದ ಮನೆಯವರು ಜಗಳ ಬಿಡಿಸಿ ಪ್ರವೀಣ್ ಕುಮಾರ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು ಎಂದು ಪೊಲೀಸ್ ತದನಿಖಾಧಿಕಾರಿ ತಿಳಿಸಿದ್ದಾರೆ.
ಪ್ರವೀಣ್ ಕುಡಿದ ಮತ್ತಿನಲ್ಲಿ ಪತ್ನಿ ಸುಮತಿ ಮೇಲೆ ಹಲ್ಲೆ ನಡೆಸಿದ್ದಾನೆ, ಹೀಗಾಗಿ ಆತನಿಂದ ದೂರವಾಗಲು ಆಕೆ ಬಯಸಿದ್ದಳು, ಆದರೆ ಆತನಿಗೆ ಪತ್ನಿ ಜೊತೆಗಿರುವುದು ಬೇಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com