ಕೇರಳ ಸರ್ಕಾರ ಹಿಂದೂಗಳ ಮೇಲೆ ಹಾಡ ಹಗಲೇ ಅತ್ಯಾಚಾರ ನಡೆಸಿದೆ: ಅನಂತ್ ಕುಮಾರ್ ಹೆಗಡೆ

ಕೇರಳ ಸರ್ಕಾರ ಹಾಡಹಗಲೇ ಹಿಂದೂಗಳ ಮೇಲೆ ಅತ್ಯಾಚಾರ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಆರೋಪಿದ್ದಾರೆ. ಕೇರಳ ರಾಜ್ಯ ಸರ್ಕಾರವು....
ಅನಂತ್ ಕುಮಾರ್ ಹೆಗಡೆ
ಅನಂತ್ ಕುಮಾರ್ ಹೆಗಡೆ
Updated on: 
ಬೆಂಗಳೂರು: ಕೇರಳ ಸರ್ಕಾರ ಹಾಡಹಗಲೇ ಹಿಂದೂಗಳ ಮೇಲೆ ಅತ್ಯಾಚಾರ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಆರೋಪಿದ್ದಾರೆ. ಕೇರಳ ರಾಜ್ಯ ಸರ್ಕಾರವು ಶಬರಿಮಲೆ ವಿವಾದವನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಹಿಂದೂ ಜನರ ಮೇಲೆ ಹಾಡಹಗಲೇ  ಅತ್ಯಾಚಾರ’ ನಡೆಸಿದೆ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಶಬರಿಮಲೆ ದೇವಾಲಯಕ್ಕೆ ಮಹಿಳೆ ಪ್ರವೇಶಿಸುವ ನಿರ್ದೇಶನ ನೀಡಿದೆ ಎನ್ನುವುದುನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ.ಆದರೆ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ವಿಷಯವಾಗಿದ್ದು ಈ ಕುರಿತಂತೆ ಸಾರ್ವಜನಿಕರೊಡನೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ತಿಳಿದಿರಬೇಕು. ಎಂದು ಅವರು ಹೇಳಿದ್ದಾರೆ.
"ಜನಸಾಮಾನ್ಯರ ನಂಬಿಕೆಯನ್ನು ನೋಯಿಸದೆ ಕೇರಳ ಸರ್ಕಾರವು ರಾಜತಾಂತ್ರಿಕವಾಗಿ ಅದನ್ನು ನಿರ್ವಹಿಸಲು ಸಂಪೂರ್ಣವಾಗಿ ವಿಫಲವಾಗಿದೆ, ಈ ಮೂಲಕ ಸರ್ಕಾರ ಹಿಂದೂಗಳ ಮೇಲೆ ಹಾಡಹಗಲು ಅತ್ಯಾಚಾರ ನಡೆಸಿದೆ"
ಬುಧವಾರ ಬೆಳಿಗ್ಗೆ  3.45ಕ್ಕೆ ಕೇರಳದ ಮಹಿಳೆಯರಾದ ಬಿಂದು ಹಾಗೂ ಕನಕದುರ್ಗ ಮಾದ್ಯಮ ಹಾಗೂ ವಿಐಪಿಗಳಿಗೆ ಮೀಸಲಾಗಿದ್ದ ದ್ವಾರದ ಮೂಲಕ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಿ ಅಯ್ಯಪ್ಪಸ್ವಾಮಿ ದರ್ಶನ ಪಡೆಇದ್ದರು. ಈ ಮಾಹಿತಿಯನ್ನು ಕೇರಳ ಸಿಎಂ ಪಿಣಾರಯ್ ವಿಜಯನ್,ಖಚಿತಪಡಿಸಿದ್ದು ಪೋಲೀಸ್ ಭದ್ರತೆಯಲ್ಲಿ ಇಬ್ಬರು ಮಹಿಳೆಯರು ದೇವಸ್ಥಾನದೊಳಕ್ಕೆ ಪ್ರವೇಶಿಸಿದ್ದಾರೆ ಎಂದು ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com