ಲಕ್ಷಾಂತರ ಜನರಿಗೆ ವಿದ್ಯಾ ದಾಸೋಹ ಮಾಡಿರುವ ಶ್ರೀ ಶಿವಕುಮಾರ ಸ್ವಾಮಿಗಳ ದಶಕಗಳ ಕರ್ಮ ಭೂಮಿಯಾಗಿದ್ದ ಅದೇ ಜಿಲ್ಲೆಯ ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನು ನಾಮಕರಣ ಮಾಡುವುದರಿಂದ ವಿಶ್ವವಿದ್ಯಾಲಯದ ಗೌರವ ಇನ್ನಷ್ಟು ಹೆಚ್ಚಾಗುವುದು ಎಂದು ಕನ್ನಡಪ್ರಭ.ಕಾಂ ಜೊತೆಗೆ ಮಾತನಾಡಿರುವ ಶಾಸಕ ನಿರಂಜನ ಕುಮಾರ್ ತಿಳಿಸಿದ್ದಾರೆ.