ಕಳೆದ ಮೂರು ತಿಂಗಳಿಂದ ಒಂದು ಹನಿ ನೀರು ಕಾಣದೇ ನನ್ನ ತಾಯಿ ಪ್ರತಿನಿತ್ಯ ಕಣ್ಣೀರಿಡುತ್ತಿದ್ದಾರೆ: ಸುಹಾಸಿನಿ

ಚೆನ್ನೈ ನಗರದಲ್ಲಿರುವ ತಮ್ಮ ಮನೆಯಲ್ಲಿ ಕಳೆದ ಮೂರು ತಿಂಗಳಿಂದ ನೀರಿನ ಹನಿಯನ್ನೇ ನೋಡಿಲ್ಲ. 85 ವರ್ಷದ ತನ್ನ ತಾಯಿ ಪ್ರತಿ ನಿತ್ಯ ಮೂರು ಮಹಡಿ ಕೆಳಗಿಳಿದು ...
ಸುಹಾಸಿನಿ
ಸುಹಾಸಿನಿ
Updated on
ಬೆಂಗಳೂರು: ಚೆನ್ನೈ ನಗರದಲ್ಲಿರುವ ತಮ್ಮ ಮನೆಯಲ್ಲಿ ಕಳೆದ ಮೂರು ತಿಂಗಳಿಂದ ನೀರಿನ ಹನಿಯನ್ನೇ ನೋಡಿಲ್ಲ. 85 ವರ್ಷದ ತನ್ನ ತಾಯಿ ಪ್ರತಿ ನಿತ್ಯ ಮೂರು ಮಹಡಿ ಕೆಳಗಿಳಿದು ಟ್ಯಾಂಕ್ ನ ಬಾಗಿಲು ತೆಗೆದು ನೀರು ಬಂದಿಲ್ಲ ಎಂದು ಕಣ್ಣೀರು ಹಾಕುತ್ತಾರೆ.
ಇದು ಖ್ಯಾತ ನಟಿ ಸುಹಾಸಿನಿ ಮಣಿರತ್ನಮ್ ಅವರು ಚೆನ್ನೈ ನೀರಿನ ಬವಣೆಯನ್ನು ಬಿಚ್ಚಿಟ್ಟ ಪರಿ. 'ಕಾವೇರಿ ಕೂಗು' ಅಭಿಯಾನ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಚೆನ್ನೈನಲ್ಲಿ ನೆರೆ ಪರಿಸ್ಥಿತಿ ಉಂಟಾದಾಗ ಯಾರಿಗೂ ನೀರಿನ ಮಹತ್ವ ಅರಿವಾಗಿರಲಿಲ್ಲ. ಆದರೆ, ಸದ್ಗುರು ಆಗಲೇ ನದಿಗಳನ್ನು ಉಳಿಸುವ ಅಭಿಯಾನ ಆರಂಭಿಸಿದ್ದರು. ಈಗ ಅದರ ಮಹತ್ವ ಅರಿವಾಗುತ್ತಿದೆ ಎಂದರು. 
ಕಾವೇರಿ ನಮ್ಮೆಲ್ಲರ ತಾಯಿ, ಅವಳನ್ನು ರಕ್ಷಿಸುವ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com