ಹಿರಿಯ ಪತ್ರಕರ್ತ ವಿಜೇಶ್ ಕಾಮತ್ ನಿಧನ

ಹಿರಿಯ ಪತ್ರಕರ್ತ ವಿಜೇಶ್ ಕಾಮತ್ (46 ವರ್ಷ) ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಬಿಎಸ್ ಯಡಿಯೂರಪ್ಪ ಸಂತಾಪ
ಬಿಎಸ್ ಯಡಿಯೂರಪ್ಪ ಸಂತಾಪ
Updated on: 
ಬೆಂಗಳೂರು: ಹಿರಿಯ ಪತ್ರಕರ್ತ ವಿಜೇಶ್ ಕಾಮತ್ (46 ವರ್ಷ) ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಡೆಕ್ಕನ್ ಹೆರಾಲ್ಡ್ ಇಂಗ್ಲಿಷ್ ಪತ್ರಿಕೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವಿಜೇಶ್ ಕಾಮತ್ ಇತ್ತೀಚೆಗೆ ಕೆಲವು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕುಟುಂಬದ ಮೂಲಗಳು ತಿಳಿಸಿರುವಂತೆ ವಿಜೇಶ್ ಕಾಮತ್ ಅವರು ನಿನ್ನೆ ರಾತ್ರಿ ಮಲ್ಲೇಶ್ವರದ ಗಾಯತ್ರಿ ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಅವಿವಾಹಿತರಾಗಿದ್ದ ವಿಜೇಶ್‌, ಬಹಳ ವರ್ಷಗಳ ಹಿಂದೆಯೇ ತಂದೆಯನ್ನು ಕಳೆದುಕೊಂಡಿದ್ದರು. ಅವರ ತಾಯಿ ಕೂಡಾ ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು. ತಂದೆ–ತಾಯಿಗೆ ವಿಜೇಶ್‌ ಕಾಮತ್ ಏಕಮಾತ್ರ ಪುತ್ರರಾಗಿದ್ದರು.
ಇತ್ತೀಚೆಗೆ ಆರೋಗ್ಯ ಹದಗೆಟ್ಟಿದ್ದ ಅವರನ್ನು ಬುಧವಾರ ಸಂಜೆ ನಗರದ ಫೋರ್ಟಿಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲೇ ಅವರು ನಿಧನರಾಗಿದ್ದರು. ಮೃತದೇಹವನ್ನು ಎಂಎಸ್‌ ರಾಮಯ್ಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com