ಬೆಂಗಳೂರು:ಪೇಜ್ -3 ಲೈವ್ ಬ್ಯಾಂಡ್ ಮೇಲೆ ಸಿಸಿಬಿ ದಾಳಿ: 71 ಯುವತಿಯರ ರಕ್ಷಣೆ, 20 ಮಂದಿ ಆರೆಸ್ಟ್

ಅಶೋಕ ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಪೇಜ್-3 ಬಾರ್ ಮತ್ತು ರೆಸ್ಟೋರೆಂಟ್ , ಲೈವ್ ಬ್ಯಾಂಡ್ ನಲ್ಲಿ ಕೆಲ ಮಹಿಳೆಯಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ 20 ಜನರನ್ನು ಪೊಲೀಸರು ಬಂಧಿಸಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಅಶೋಕ ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಪೇಜ್-3 ಬಾರ್ ಮತ್ತು ರೆಸ್ಟೋರೆಂಟ್ , ಲೈವ್ ಬ್ಯಾಂಡ್ ನಲ್ಲಿ ಕೆಲ ಮಹಿಳೆಯಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ 20 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 88 ಸಾವಿರದ 200 ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ತಿಕ್ ಹೆಚ್ (24), ಜೀವನ್ ಕುಮಾರ್ ( 25 ) ಮನೋಜ್, ಆನಂದ್, ಸೇರಿದಂತೆ 20 ಜನರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಪೇಜ್ -3 ಬಾರ್ ಮತ್ತು ರೆಸ್ಟೋರೆಂಟ್ ಎಂಬ ಲೈವ್ ಬ್ಯಾಂಡ್ ನಲ್ಲಿ ಕೆಲವು ಮಹಿಳೆಯರನ್ನು ಅಕ್ರಮವಾಗಿ ಇರಿಸಿಕೊಂಡು ಅಶ್ಲೀಲ ನೃತ್ಯ ಮಾಡಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಬಿಐ ಪೊಲೀಸರು  ಗುರುವಾರ ರಾತ್ರಿ  ದಾಳಿ ನಡೆಸಿದ್ದಾರೆ.
ದಾಳಿ ವೇಳೆಯಲ್ಲಿ  ವಿವಿಧ ರಾಜ್ಯಗಳಿಗೆ ಸೇರಿದ 71 ಮಹಿಳೆಯರನ್ನು  ರಕ್ಷಿಸಿದ್ದು, ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ 20 ಮಂದಿಯನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com