ಹಾವೇರಿ: ಬೈಕ್‌ಗೆ ಸಾರಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಹುಡುಗಿ ನೋಡಲು ಹೊರಟ್ಟಿದ್ದ ಯುವಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಕ್ರಾಸ್ ಬಳಿ ನಡೆದಿದೆ.
ಬೈಕ್‌ನಲ್ಲಿದ್ದ ಜಗದೀಶ್ ದೀಪಾಲಿ(28) ಮತ್ತು ಹನುಮಂತಪ್ಪ ದೀಪಾಲಿ (60) ಮೃತ ದುರ್ದೈವಿಗಳು.
ಜಗದೀಶ್‌ಗೆ ಹುಡುಗಿ ನೋಡಲು ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತರು ಮೂಲತಃ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದವರು.
ಅಪಘಾತದ ನಂತರ ಚಾಲಕ ಬಸ್ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.