ಪಬ್ ಮೇಲಿಂದ ಬಿದ್ದು ಯುವಜೋಡಿ ಸಾವು: ಬಿಯರ್ ಪಬ್ ಮಾಲೀಕನ ಬಂಧನ

Published On :
ಬೆಂಗಳೂರು: ಚರ್ಚ್ ಸ್ಟ್ರೀಟ್ ನಲ್ಲಿರುವ ಪಬ್ ನ 3ನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದ ಯುವಜೋಡಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಬಿಇಐಆರ್ ಪಬ್ ಮಾಲೀಕ ಚಂದನ್ ಮೂಡಿಗೆರೆ ಅವರನ್ನು ಕಬ್ಬನ್ ಪಾರ್ಕ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈವರೆಗೆ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳು ರಿದಂತೆ ಎಂಟು ಜನರ ಹೇಳಿಕೆಯನ್ನು ದಾಖಲಿಸಿದ್ದಾರೆ.
ಕಳೆದ ಶುಕ್ರವಾರ ಚರ್ಚ್ ಸ್ಟ್ರೀಟ್ನಲ್ಲಿರುವ ಬಿಯರ್ ಪಬ್ ಮೇಲಿನಿಂದ ಪವನ್ ಮತ್ತು ವೇದ ಎಂಬಿಬ್ಬರು ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದರು.
ಚಂದನ್ ತನ್ನ ಕಾರಿನಲ್ಲಿ ನಗರಕ್ಕೆ ಬರುತ್ತಿದ್ದಾಗ, ತಡರಾತ್ರಿ, ನೇಲಮಂಗಲ ಟೋಲ್ ಗೇಟ್ನಲ್ಲಿ ಅವರನ್ನು ಬಂಧಿಸಲಾಯಿತು." ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಾನು ಹಲವಾರು ವರ್ಷಗಳ ಕಾಲ ಈ ಪಬ್ ನಡೆಸಿದ ನಂತರ ಈಗ ಅದನ್ನು ಅಭಿಷೇಕ್ ಕುಲಕರ್ಣಿಗೆ ಗುತ್ತಿಗೆಗೆ ನೀಡಿದ್ದೇನೆ ಎಂದು ಚಂದನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ಪಬ್ಗೆ ಭೇಟಿ ನೀಡಿಲ್ಲ ಎಂದು ಚಂದನ್ ಹೇಳಿದ್ದಾರೆ.
"ನಾವು ಇದುವರೆಗೆ ಪಬ್ ನ ಸಿಬ್ಬಂದಿ ಸೇರಿದಂತೆ ಎಂಟು ಜನರ ಹೇಳಿಕೆ ಪಡೆದಿದ್ದೇವೆ. ಆಸ್ತಿಯ ಮಾಲೀಕರಾದ ಖಾಸಗಿ ಬಿಲ್ಡರ್ಗೆ ನೋಟಿಸ್ ನೀಡಲಾಗಿದೆ ಪಬ್ ತೆರೆದಂದಿನಿಂದಲೂ ಆ ಕಟ್ಟಡದ ನೆಲಮಾಳಿಗೆಯ ಕಿಟಕಿ ತೆರೆದುಕೊಂಡೇ ಇತ್ತು. ಬಿಲ್ಡರ್ನ ನಿರ್ದೇಶಕರು ಮತ್ತು ನಿರ್ವಹಣೆಯಿಂದ ನಾವು ವಿವರಗಳನ್ನು ಕೇಳಿದ್ದೇವೆ. ಒಮ್ಮೆ ನಾವು ಅವರಿಂದ ಪ್ರತಿಕ್ರಿಯೆ ಪಡೆದ ನಂತರ ಈ ಸಾವಿಗೆ ಕಾರಣವಾಗಿರುವ ಆರೋಪದ ಮೇಲೆ ಇನ್ನಷ್ಟು ಜನರ ಬಂಧನ ಮಾಡಲಿದ್ದೇವೆ" ಪೋಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


