ಚೆನ್ನೈ, ಮೈಸೂರು ಮಾರ್ಗದ ರೈಲು ಸಂಚಾರ ಅವಧಿಯಲ್ಲಿ ಬದಲಾವಣೆ

ಹೊಸ ರೈಲು ಸಂಪರ್ಕ ಮಾರ್ಗ ಬೆಂಗಳೂರು ಮತ್ತು ಚೆನ್ನೈ ನಡುವೆ ರೈಲು ಸಂಚಾರದ ಅವಧಿಯಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಹೊಸ ರೈಲು ಸಂಪರ್ಕ ಮಾರ್ಗ ಬೆಂಗಳೂರು ಮತ್ತು ಚೆನ್ನೈ ನಡುವೆ ರೈಲು ಸಂಚಾರದ ಅವಧಿಯಲ್ಲಿ ಸಣ್ಣ ಬದಲಾವಣೆ ತಂದಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್ಆರ್) ನಿಲ್ದಾಣದಲ್ಲಿ ಶತಾಬ್ದಿ ರೈಲಿನ ನಿಲುಗಡೆ ಅವಧಿ ಇನ್ನು ಮುಂದೆ 5 ನಿಮಿಷ ಮಾತ್ರ ಆಗಿರುತ್ತದೆ. ಇದೇ ಮೊದಲ ಬಾರಿಗೆ ರೈಲು ವೇಳಾಪಟ್ಟಿಯನ್ನು ಐಆರ್ ಸಿಟಿಸಿ ಗ್ಯಾಲರಿ ಪುಟದಲ್ಲಿ ಆನ್ ಲೈನ್ ನಲ್ಲಿ ವೀಕ್ಷಿಸಬಹುದಾಗಿದೆ.
ಚೆನ್ನೈ-ಬೆಂಗಳೂರು ಮೈಲ್ ಇನ್ನು 15 ನಿಮಿಷ ತಡವಾಗಿ ತಲುಪಲಿದೆ. ಚೆನ್ನೈಯಿಂದ ರಾತ್ರಿ 10.55ಕ್ಕೆ ಹೊರಟು ಸಂಗೊಳ್ಳಿ ರಾಯಣ್ಣ ನಿಲ್ದಾಣವನ್ನು ಬೆಳಗ್ಗೆ 5 ಗಂಟೆಗೆ ತಲುಪಲಿದೆ. ಚೆನ್ನೈ-ಬೆಂಗಳೂರು ಲಾಲ್ ಬಾಗ್ ಎಕ್ಸ್ ಪ್ರೆಸ್ 5 ನಿಮಿಷ ತಡವಾಗಲಿದೆ. ಚೆನ್ನೈಯಿಂದ ಅಪರಾಹ್ನ 3.30ಕ್ಕೆ ಹೊರಟು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತವನ್ನು 9.35ಕ್ಕೆ ತಲುಪಲಿದೆ.
ಚೆನ್ನೈ-ಬೆಂಗಳೂರು ಬೃಂದಾವನ ಎಕ್ಸ್ ಪ್ರೆಸ್ ಪ್ರಯಾಣ ಅವಧಿ 10 ನಿಮಿಷ ಜಾಸ್ತಿಯಾಗಿರುತ್ತದೆ. ಚೆನ್ನೈ ಸೆಂಟ್ರಲ್ ನಿಂದ 7.40ಕ್ಕೆ ಬೆಳಗ್ಗೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 2 ಗಂಟೆಗೆ ತಲುಪಲಿದೆ. 
ಮೈಸೂರು-ಚೆನ್ನೈ ಶತಾಬ್ದಿ ಎಕ್ಸ್ ಪ್ರೆಸ್ 10 ನಿಮಿಷ ಬೇಗನೆ ತಲುಪಲಿದೆ. ಮೈಸೂರು ಮತ್ತು ಬೆಂಗಳೂರು ನಡುವೆ 5 ನಿಮಿಷ ವೇಗವಾಗಿ ಚಲಿಸಿ ಜುಲೈ 1ರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ 5 ನಿಮಿಷ ಮಾತ್ರ ನಿಲ್ಲಲಿದೆ. ಸಂಜೆ 4.10ಕ್ಕೆ ಆಗಮಿಸಿ 4.15ಕ್ಕೆ ಹೊರಡಲಿದೆ.
ಬೆಂಗಳೂರು-ಕಣ್ಣೂರು ಎಕ್ಸ್ ಪ್ರೆಸ್ ಕುಣಿಗಲ್ ಮಾರ್ಗವಾಗಿ 25 ನಿಮಿಷ ವೇಗವಾಗಿ ಬೆಂಗಳೂರು ಮತ್ತು ಮಂಗಳೂರು ಮಧ್ಯೆ ಸಂಚರಿಸಲಿದೆ. ಕೆಎಸ್ ಆರ್ ನಿಲ್ದಾಣದಿಂದ 7.15ಕ್ಕೆ ಹೊರಟು ಮಂಗಳೂರಿಗೆ ಬೆಳಗ್ಗೆ 5.55ಕ್ಕೆ ತಲುಪಲಿದೆ. ಮೈಸೂರು ಕಚೆಗುಡ ಎಕ್ಸ್ ಪ್ರೆಸ್ 10 ನಿಮಿಷ ವೇಗವಾಗಿ ಸಂಚರಿಸಲಿದ್ದು ಮೈಸೂರು-ಬೆಂಗಳೂರು ಮಧ್ಯೆ ರೈಲು 15 ನಿಮಿಷ ವೇಗವಾಗಿ ಸಂಚರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com