ಬೆಂಗಳೂರು: ಆರ್ಥಿಕ ಮುಗ್ಗಟ್ಟಿನಿಂದ ಬೇಸತ್ತು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ

ಜೀವನದಲ್ಲಿ ಜಿಗುಪ್ಸೆಗೊಂಡ ತಾಯಿಯೊಬ್ಬಳು ತನ್ನಿಬ್ಬರು ಮಜ್ಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡ ತಾಯಿಯೊಬ್ಬಳು ತನ್ನಿಬ್ಬರು ಮಜ್ಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡ ತೋಗೂರಿನಲ್ಲಿ ನಡೆದ ಘಟನೆಯಲ್ಲಿ ರಾಧಮ್ಮ (55) ಸಂತೋಷ್(30) ಹಾಗೂ ಹರೀಶ್ (25)  ಎನ್ನುವವರು ಮೃತಪಟ್ಟಿದ್ದಾರೆ.ರಾಧಮ್ಮನ ಇಬ್ಬರೂ ಮಕ್ಕಳು ವಿಶೇಷ ಚೇತನರಾಗಿದ್ದರು. ಅವರ ಪೋಷಣೆಗಾಗಿ ಬೇಕಾದರ್ಷ್ಟು ಆರ್ಥಿಕ ಶಕ್ತಿ ಇರದ ಕಾರಣ ಮೂವರೂ ಈ ತೀರ್ಮಾನಕ್ಕೆ ಬಂದಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳ ಹಿಂದೆ ತಮಿಳುನಾಡು ಮೂಲದ ದಶರಥ ರೆಡ್ಡಿ ಪತ್ನಿ ರಾಧಮ್ಮನನ್ನು ನಡುನೀರಲ್ಲೇ ಕೈಬಿಟ್ಟು ಓಡಿ ಹೋಗಿದ್ದನು. ಅಂದಿನಿಂದ ಇಂದಿನವರೆಗೆ ರಾಧಮ್ಮ ಒಬ್ಬರೇ ತಮ್ಮಿಬ್ಬರು ವಿಶೇಷ ಚೇತನ ಮಕ್ಕಳನ್ನು ಸಾಕುತ್ತಾ ಬಂದಿದ್ದಾರೆ.  ಆದರೆ ಕುಟುಂಬದ ಬಡತನ, ಆರ್ಥಿಕ ಮುಗ್ಗಟ್ಟು ಅವರನ್ನು ಬಸವಳಿಯುವಂತೆ ಮಾಡಿದೆ.

ಕಡೆಗೊಮ್ಮೆ ಜೀವನದಲ್ಲೇ ಜಿಗುಪ್ಸೆಗೊಂಡಿರುವ ತಾಯಿ ತಮ್ಮಿಬ್ಬರು ಮಕ್ಕಳಿಗೂ ವಿಷ ಉಣ್ಣಿಸಿ ತಾನು ಸಹ ಆತ್ಮಹತ್ಯೆಗೆ ಮುಂದಾಗಿದ್ದಾರೆ.

ಘಟನೆ ಕುರಿತಂತೆ ಮಾಹಿತಿ ಪಡೆದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com