ಬೆಂಗಳೂರು: ಪತ್ನಿ ಮೇಲೆ ಶಂಕೆ, ಮನೆಯಲ್ಲಿ 22 ಸ್ಪೈ ಕ್ಯಾಮೆರಾ ಇಟ್ಟ ಪತಿ; ಆತನ ತಲೆ ಒಡೆದ ಪತ್ನಿ!

ಪತ್ನಿಯ ಮೇಲೆ ಅನುಮಾನಗೊಂಡು ಪತಿ ಮನೆಯಲ್ಲಿ 22 ಸ್ಪೈ ಕ್ಯಾಮೆರಾ ಇಟ್ಟು ಹೆಂಡತಿಯ ಚಲನವಲನ ಗಮನಿಸುತ್ತಿದ್ದ ಇದನ್ನು ತಿಳಿದ ಪತ್ನಿ ಮನೆಯಲ್ಲಿದ್ದ ಬ್ಯಾಟ್ ನಿಂದ ಆತನ ತಲೆಯನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಪತ್ನಿಯ ಮೇಲೆ ಅನುಮಾನಗೊಂಡು ಪತಿ ಮನೆಯಲ್ಲಿ 22 ಸ್ಪೈ ಕ್ಯಾಮೆರಾ ಇಟ್ಟು ಹೆಂಡತಿಯ ಚಲನವಲನ ಗಮನಿಸುತ್ತಿದ್ದ ಇದನ್ನು ತಿಳಿದ ಪತ್ನಿ ಮನೆಯಲ್ಲಿದ್ದ ಬ್ಯಾಟ್ ನಿಂದ ಆತನ ತಲೆಯನ್ನು ಹೊಡೆದಿದ್ದಾಳೆ. 
ಬೆಂಗಳೂರಿನ ಜಯನಗರದಲ್ಲಿ ದಂಪತಿಗಳು ವಾಸವಾಗಿದ್ದರು. ಸಾಫ್ಟ್ ವೇರ್ ಉದ್ಯೋಗಿಯಾಗಿರುವ 44 ವರ್ಷದ ಸುದರ್ಶನ್ ತನ್ನ ಪತ್ನಿಯ ಮೇಲೆ ಅನುಮಾನಗೊಂಡು ಮನೆಯಲ್ಲಿ 22 ಸ್ಪೈ ಕ್ಯಾಮೆರಾಗಳನ್ನು ಟೆಕ್ಕಿ ಅಳವಡಿಸಿದ್ದನು. ಇದೇ ಅಲ್ಲದೆ ಪತ್ನಿಯ ಮೊಬೈಲ್ ನಲ್ಲೂ ಸ್ಪೈವೇರ್ ಪ್ರೋಗ್ರಾಮ್ ನನ್ನು ಹಾಕಿ ಆಕೆಯ ಮೊಬೈಲ್ ಮೇಲೆಯೂ ಕಣ್ಣಿಟ್ಟಿದ್ದನು. ಪತಿಯ ಅತಿಯಾದ ಅನುಮಾನ ಬುದ್ಧಿಯಿಂದ ಬೇಸತ್ತಿದ್ದ ಪತ್ನಿ ಬ್ಯಾಟ್ ನಿಂದ ಗಂಡನ ತಲೆಯನ್ನು ಹೊಡೆದಿದ್ದಾಳೆ. ಪರಿಣಾಮ ಪತಿಯ ತಲೆಗೆ ಗಂಭೀರ ಗಾಯವಾಗಿದೆ.
2010ರಲ್ಲಿ ಸುದರ್ಶನ್ ಅವರು ಸಂಜನಾ(ಹೆಸರು ಬದಲಾಯಿಸಲಾಗಿದೆ) ಮದುವೆಯಾಗಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಕೆಲ ವರ್ಷಗಳಿಂದ ಪತ್ನಿಯ ಮೇಲೆ ಅನುಮಾನಗೊಂಡ ಸುದರ್ಶನ್ ಕ್ಯಾಮೆರಾಗಳನ್ನು ಅಳವಡಿಸಿದ್ದನು. ಇದೀಗ ಇಬ್ಬರ ಮಧ್ಯೆ ಮನಸ್ಥಾಪ ಶುರುವಾಗಿದ್ದು ವಿಚ್ಛೇದನಕ್ಕೆ ಅರ್ಜಿ ಕೂಡ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com