ಇಂಡಿಕಾ ಕಾರಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಮಗು ಸೇರಿ ನಾಲ್ವರ ಸ್ಥಿತಿ ಗಂಭೀರ

ಕೆಎಸ್ ಆರ್ ಟಿಸಿ ಬಸ್ಸೊಂದು ಇಂಡಿಕಾ ಕಾರಿಗೆ ವೇಗವಾಗಿ ಗುದ್ದಿದ ಪರಿಣಾಮ ಮಗು ಸೇರಿ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ನಗರದ ನವರಂಗ್ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಕೆಎಸ್ ಆರ್ ಟಿಸಿ ಬಸ್ಸೊಂದು ಇಂಡಿಕಾ ಕಾರಿಗೆ ವೇಗವಾಗಿ ಗುದ್ದಿದ ಪರಿಣಾಮ ಮಗು ಸೇರಿ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ನಗರದ ನವರಂಗ್ ಸಿಗ್ನಲ್ ನಲ್ಲಿ ನಡೆದಿದೆ. 
ಬಸ್ ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.  ಬೆಳಗಿನ ಜಾವ 3:30 ಕ್ಕೆ ಮಗುವಿಗೆ ಜ್ವರ ಎಂದು ವಾಹನ ಸಿಗದೆ ಅಳುತ್ತಿದ್ದ ದಂಪತಿಗೆ ಸಹಾಯ ಮಾಡಲು ಹೋಗಿದ್ದ ಕಾರು ಚಾಲಕ ಹಾಗೂ ಆತನ ಸ್ನೇಹಿತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. 
ಗಾಯಾಳುಗಳಿಗೆ ಫೋರ್ಟಿಸ್ ಹಾಗೂ ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕ ಹಾಗೂ ಕಂಡಕ್ಟರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com