ಬೆಳಗಾವಿ: ಗೋವಿನ ಹೊಟ್ಟೆ ಮೇಲೆ ತಾಯಿ ಮಗುವನ್ನು ಆರೈಕೆ ಮಾಡುವ ಚಿತ್ರ, ಫೋಟೋ ವೈರಲ್!

ಆಕಳಿನ ಹೊಟ್ಟೆ ಮೇಲೆ ತಾಯಿ ಮಗುವನ್ನ ಆರೈಕೆ ಮಾಡುವ ಹೋಲಿಕೆಯ ಚಿತ್ರ ಮೂಡಿರುವ ಘಟನೆ ಬೆಳಗಾವಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.
ಗೋವು
ಗೋವು
Updated on: 

ಚಿಕ್ಕೋಡಿ: ಆಕಳಿನ ಹೊಟ್ಟೆ ಮೇಲೆ ತಾಯಿ ಮಗುವನ್ನ ಆರೈಕೆ ಮಾಡುವ ಹೋಲಿಕೆಯ ಚಿತ್ರ ಮೂಡಿರುವ ಘಟನೆ ಬೆಳಗಾವಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. 

ಹೌದು, ರಾಹುಲ ಜಾಧವ ಎಂಬ ರೈತನಿಗೆ ಸೇರಿರುವ ಆಕಳು ಮೇಲೆ ತಾಯಿ ಮಗುವನ್ನು ಆರೈಕೆ ಮಾಡುವ ರೀತಿಯಲ್ಲಿ ಚಿತ್ರ ಮೂಡಿದ್ದು ಅಚ್ಚರಿಗೆ ಕಾರಣವಾಗಿದೆ. ಮೂಲತಃ ಕೃಷಿ ಜೊತೆಗೆ ಹೈನುಗಾರಿಕೆ ಮಾಡುವ ಜಾಧವ ಕುಟುಂಬ ನಾಲ್ಕು ವರ್ಷಗಳ ಹಿಂದೆ ಮಹಾರಾಷ್ಟ್ರದ ಮೀರಜ ಜಾನುವಾರು ಮಾರುಕಟ್ಟೆಯಿಂದ ಬಿಳಿ - ಕಪ್ಪು ಬಣ್ಣದ ಜರಸಿ ಪ್ರಬೇಧದ ಆಕಳನ್ನು ತಂದಿದ್ದರು.

ಕಳೆದ ಮೂರು ವರ್ಶಗಳಿಂದ ಹೊಟ್ಟೆಯ ಮೇಲೆ ಈ ರೀತಿ ಮಚ್ಚೆ ಮೂಡಲು ಆರಂಭಾವಾಗಿ ದಿನ ಕಳೆದಂತೇ ಈಗ ಸಂಪೂರ್ಣವಾಗಿ ಮಹಿಳೆ ಕುಳಿತುಕೊಂಡು ಮಗುವನ್ನ ಆರೈಕೆ ಮಾಡುವ ರೀತಿಯ ಚಿತ್ರ ಸ್ಪಷ್ಟವಾಗಿ ಕಾಣುತ್ತಿದೆ. ಈ ರೀತಿಯ ಅಚ್ಚರಿಯ ಚಿತ್ರ ಮೂಡಿರುವ ಕಾರಣ ಹೆಚ್ಚಿನ ಸಂಖ್ಯೆಯ ಜನರು ಬಂದು ಈ ಅಚ್ಚರಿಯನ್ನ ಕಣ್ಣು ತುಂಬಿ ಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com