ಕ್ರಿಕೆಟ್ ವಿಚಾರವಾಗಿ ನಡೆದ ಜಗಳಕ್ಕೆ ವಿದ್ಯಾರ್ಥಿ ಜೀವವೇ ಹೋಯ್ತು!

ವಿದ್ಯಾರ್ಥಿಯೊಬ್ಬನನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ‌ ನಂದಿನಿ ಲೇಔಟ್‍ನ ಸರಸ್ವತಿಪುರದಲ್ಲಿ ನಡೆದಿದೆ.
ಕ್ರಿಕೆಟ್ ವಿಚಾರವಾಗಿ ನಡೆದ ಜಗಳಕ್ಕೆ ವಿದ್ಯಾರ್ಥಿ ಜೀವವೇ ಹೋಯ್ತು!
ಕ್ರಿಕೆಟ್ ವಿಚಾರವಾಗಿ ನಡೆದ ಜಗಳಕ್ಕೆ ವಿದ್ಯಾರ್ಥಿ ಜೀವವೇ ಹೋಯ್ತು!
Updated on

ಬೆಂಗಳೂರು: ವಿದ್ಯಾರ್ಥಿಯೊಬ್ಬನನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ‌ ನಂದಿನಿ ಲೇಔಟ್‍ನ ಸರಸ್ವತಿಪುರದಲ್ಲಿ ನಡೆದಿದೆ.

20 ವರ್ಷದ ಉಮಾ ಮಹೇಶ್ವರ ಕೊಲೆಯಾದ ವಿದ್ಯಾರ್ಥಿ.
`
ನವರಂಗ್ ಬಳಿಯ ಎಂಇಎಸ್ ಕಾಲೇಜಿನಲ್ಲಿ ಬಿಬಿಎಂ ಪದವಿ ಓದುತ್ತಿದ್ದ ಗಣೇಶ ಬ್ಲಾಕ್‌ನ ಉಮಾಮಹೇಶ್ವನನ್ನು ಕೊಲೆಗೈದ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ

ಕಳೆದೆರಡು ದಿನಗಳ ಹಿಂದೆ ಕ್ರಿಕೆಟ್ ಆಡುವ ವಿಚಾರದಲ್ಲಿ ಸ್ನೇಹಿತರೊಡನೆ ಉಮಾಮಹೇಶ್ವರ್ ಜಗಳವಾಡಿ ಓರ್ವನ ಕೆನ್ನೆಗೆ ಬಲವಾಗಿ ಹೊಡೆದಿದ್ದ. ಅದಾಗ ಅವನ ಸ್ನೇಹಿತರು ಜಗಳ ಬಿಡಿಸಿ ಬುದ್ದಿ ಹೇಳಿ ಹಿಂದೆ ಕಳಿಸಿದ್ದರು.

ಆದರೆ ಕೆನ್ನೆಗೆ ಬಾರಿಸಿಕೊಂಡ ಸ್ನೇಹಿತ ಮಾತ್ರ ದ್ವೇಷದಿಂದ ಕಾಯುತ್ತಿದು ಮಂಗಳವಾರ ಸಂಜೆ ಏಳರ ಏಳೆ ಮೂವರು ಸ್ನೇಹಿತರ ಗುಂಪಿನೊಡನೆ ಹ್ಗಣೇಶ ಬ್ಲಾಕ್ ನಲ್ಲಿ ಉಮಾಮಹೇಶ್ವರನೊಂದಿಗೆ ಜಗಳ ತೆಗೆದಿದ್ದಾನೆ. ಆಗ ಜಗಳ ವಿಕೋಪಕ್ಕೆ ತಿರುಗಿ ಉಮಾಮಹೇಶ್ವರನ ಕಿಬ್ಬೊಟ್ಟೆಗೆ ಚಾಕುವಿನಿಂದ ಚುಚ್ಚಲಾಗಿದೆ. ಸ್ಥಳೀಯರು ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲ ನೀಡದೆ ಆತ ಮೃತಪಟ್ಟಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com