ತುಮಕೂರು: ಅನಿಲ ಸೋರಿಕೆಯಾಗಿ‌‌ ಬಾಲಕ ಸಾವು

ಮ್ಯಾಗಿ ಮಾಡಲು ಬಾಲಕನೋರ್ವ ಗ್ಯಾಸ್ ಸ್ವೌ ಹಚ್ಚಲು ಹೋಗಿ ಅನಿಲ ಸೋರಿಕೆಯಾಗಿ ಬೆಂಕಿ ತಗುಲಿ ಮೃತಪಟ್ಟಿರುವ ದುರ್ಘಟನೆ ನಗರದ ಕ್ರಿಶ್ಚಿಯನ್​ ಸ್ಟ್ರೀಟ್​ನಲ್ಲಿ ನಡೆದಿದೆ. 
ತುಮಕೂರು: ಅನಿಲ ಸೋರಿಕೆಯಾಗಿ‌‌ ಬಾಲಕ ಸಾವು
ತುಮಕೂರು: ಅನಿಲ ಸೋರಿಕೆಯಾಗಿ‌‌ ಬಾಲಕ ಸಾವು
Updated on: 

ತುಮಕೂರು: ಮ್ಯಾಗಿ ಮಾಡಲು ಬಾಲಕನೋರ್ವ ಗ್ಯಾಸ್ ಸ್ವೌ ಹಚ್ಚಲು ಹೋಗಿ ಅನಿಲ ಸೋರಿಕೆಯಾಗಿ ಬೆಂಕಿ ತಗುಲಿ ಮೃತಪಟ್ಟಿರುವ ದುರ್ಘಟನೆ ನಗರದ ಕ್ರಿಶ್ಚಿಯನ್​ ಸ್ಟ್ರೀಟ್​ನಲ್ಲಿ ನಡೆದಿದೆ. 

7 ವರ್ಷದ ನೋಯಲ್​ ಪ್ರಸಾದ್ ಎಂಬ ಬಾಲಕ ಪಾಲಕರಿಗೆ ತಾನೇ ಮ್ಯಾಗಿ ಮಾಡುವುದಾಗಿ ತಿಳಿಸಿದ್ದ. ನಂತರ ಅಡುಗೆ ಮನೆಗೆ ಹೋಗಿ ಗ್ಯಾಸ್​ ಸ್ಟೌ ಆನ್​ ಮಾಡಿದ್ದಾನೆ. 

ಆದರೆ, ಲೈಟರ್​ನಲ್ಲಿ ಬೆಂಕಿ ಹಚ್ಚಲು ತಡ ಮಾಡಿದ ಕಾರಣ ಜಾಸ್ತಿ ಗ್ಯಾಸ್​ ಸೋರಿಕೆ ಆಗಿದೆ. ಬಳಿಕ ಒಮ್ಮೆಲೇ ಜೋರಾಗಿ ಬೆಂಕಿ ಹೊತ್ತುಕೊಂಡು ಬಾಲಕ ತೀವ್ರವಾಗಿ ಗಾಯಗೊಂಡಿದ್ದನು. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಬಾಲಕನ‌ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತುಮಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com