ರಾಜ್ಯ

ಈಗ....ಕಿತ್ತೂರು ಹುಡುಗ, ಕಾಶ್ಮೀರಿ ಹೆಣ್ಣನ್ನು ಲಗ್ನವಾಗಬಹುದು..; ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ

ಈಗ....ಕಿತ್ತೂರು ಹುಡುಗ, ಕಾಶ್ಮೀರಿ ಹೆಣ್ಣನ್ನು ಲಗ್ನವಾಗಬಹುದು..; ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ
ಈಗ....ಕಿತ್ತೂರು ಹುಡುಗ, ಕಾಶ್ಮೀರಿ ಹೆಣ್ಣನ್ನು ಲಗ್ನವಾಗಬಹುದು..; ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ
Published On :

ಬೆಳಗಾವಿ: ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ರದ್ದುಪಡಿಸುವ ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಜನರು ಕ್ಷಿಪ್ರಗತಿಯಲ್ಲಿ ಸ್ವೀಕರಿಸಿದ್ದು, ಸರ್ಕಾರದ ಕ್ರಮ ಯಶಸ್ವಿಯಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

ಬೆಳಗಾವಿ ನಗರದಿಂದ 45 ಕಿಮೀ ದೂರದಲ್ಲಿರುವ ಐತಿಹಾಸಿಕ ಸ್ಥಳ ಕಿತ್ತೂರಿನಲ್ಲಿ ಅ.25 ರಂದು ರಾತ್ರಿ  ಆಯೋಜಿಸಲಾಗಿದ್ದ ಮೂರು ದಿನಗಳ ಕಿತ್ತೂರು ಉತ್ಸವ-2019 ಸಮಾರೋಪ ಸಮಾರಂಭ ಉದ್ದೇಶಿಸಿ ಸಚಿವರು ಮಾತನಾಡಿದರು.

ಸಂವಿಧಾನದ 370 ವಿಧಿ ರದ್ದತಿಯ ನಂತರ ಕಾಶ್ಮೀರ ದೇಶದ ಇತರ ರಾಜ್ಯಗಳಂತಾಗಿದೆ. ಈಗ ನಮ್ಮ ಕಿತ್ತೂರಿನ ಹುಡುಗ ಕಾಶ್ಮೀರಿ ಹುಡುಗಿಯನ್ನು ವಿವಾಹವಾಗಬಹುದು....! ಕಾಶ್ಮೀರಿ ಹುಡುಗಿ ಕಿತ್ತೂರಿನ ಹುಡುಗನನ್ನು ಮದುವೆಯಾಗಬಹುದು ಎಂದರು. 
 
ಮುಂಬೈ ಕರ್ನಾಟಕ ಪ್ರದೇಶವನ್ನು "ಕಿತ್ತೂರು ಕರ್ನಾಟಕ" ಎಂದು ಹೆಸರಿಸುವ ವಿಷಯ ಪ್ರಸ್ತಾಪಿಸಿದ ಸಚಿವರು, ಪ್ರಸ್ತಾವನೆ ಹಲವು ದಶಕಗಳಿಂದ ಸರ್ಕಾರದ ಪರಿಶೀಲನೆಯಲ್ಲಿದೆ. ಇದು ಉತ್ತರ ಕರ್ನಾಟಕ ಭಾಗದ ಜನರ ಹಳೆಯ ಬೇಡಿಕೆಯಾಗಿದೆ. ಈಗಾಗಲೇ ಹೈದ್ರಾಬಾದ್ ಕರ್ನಾಟಕವನ್ನು "ಕಲ್ಯಾಣ ಕರ್ನಾಟಕ" ಎಂದು ಸರ್ಕಾರ ನಾಮಕರಣಗೊಳಿಸಿದೆ ಎಂದರು.

ಕಿತ್ತೂರು ಶಾಸಕ ಮಹಂತೇಶ್ ದೊಡ್ಡ ಗೌಡರ್ ಮಾತನಾಡಿ, ಬೆಂಗಳೂರು ಹಾಗೂ ಕೊಲ್ಹಾಪುರ್ ನಡುವೆ ನಿತ್ಯ ಸಂಚರಿಸುವ ಕಿತ್ತೂರು ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ಕಿತ್ತೂರು ಪಟ್ಟಣದ ಮೂಲಕ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಸಚಿವ ಸುರೇಶ್ ಅಂಗಡಿ ಅವರಿಗೆ ಬೇಡಿಕೆ ಇರಿಸಿದರು. 
 
ಕಿತ್ತೂರಿಗೆ ಒಂದು ರೈಲ್ವೆ ನಿಲ್ದಾಣ ಮಂಜೂರು ಮಾಡಬೇಕು. ಕಿತ್ತೂರು ಮೂಲಕ ಬೆಳಗಾವಿ ಹಾಗೂ ಧಾರವಾಡ ನಡುವೆ ನೂತನ ರೈಲ್ವೆ ಮಾರ್ಗ ಸಮೀಕ್ಷೆ ಪೂರ್ಣಗೊಂಡಿದ್ದು, ಆದಷ್ಟು ಶೀಘ್ರ ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ರೈಲ್ವೆ ಸಚಿವರು ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.

ಈ ನಡುವೆ, ಅಂಚೆ ಇಲಾಖೆ ಕಿತ್ತೂರು ಉತ್ಸವ ಅಂಗವಾಗಿ "ರಾಣಿ ಚೆನ್ನಮ್ಮ ರೈಲು" ಕುರಿತ ವಿಶೇಷ ಕೋಟೆ ಹಾಗೂ ಅಂಚೆ ಚೀಟಿ ಬಿಡುಗಡೆಗೊಳಿಸಿದೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ,  ಜಿಲ್ಲಾ ಪೊಲೀಸ್ ವರಿಷ್ಠ ಲಕ್ಷ್ಮಣ್ ನಿಂಬರಗಿ, ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿ.ರಾಜೇಂದ್ರ ಹಾಗೂ ವಿವಿಧ ಮಠಗಳ ಸ್ವಾಮಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.