ಒಂದು ದಿನಕ್ಕೆ ಬ್ರಿಟಿಷ್ ಹೈ ಕಮಿಷನರ್ ಆಗಬೇಕೆ? ರಾಜ್ಯದ ಯುವತಿಯರಿಗೆ ಇಲ್ಲಿದೆ ಅವಕಾಶ!

ಬ್ರಿಟಿಷ್ ಹೈ ಕಮಿಷನರ್ ದೈನಂದಿನ ಜೀವನ ಹೇಗಿರುತ್ತದೆ ಎಂದು ತಿಳಿದುಕೊಳ್ಳಲು ನಿಮಗೆ ಆಸೆ ಇದ್ದರೇ ಇಲ್ಲಿದೆ ನಿಮಗೆ ಸುವರ್ಣಾವಕಾಶ, 18-23  ವಯಸ್ಸಿನ ಮಹಿಳೆಯರು ಸ್ವತಃ ಅನುಭವ ಪಡೆಯಬಹುದಾಗಿದೆ.
ರಿಚರ್ಡ್ ಹೋಮರ್
ರಿಚರ್ಡ್ ಹೋಮರ್
Updated on

ಬೆಂಗಳೂರು: ಬ್ರಿಟಿಷ್ ಹೈ ಕಮಿಷನರ್ ದೈನಂದಿನ ಜೀವನ ಹೇಗಿರುತ್ತದೆ ಎಂದು ತಿಳಿದುಕೊಳ್ಳಲು ನಿಮಗೆ ಆಸೆ ಇದ್ದರೇ ಇಲ್ಲಿದೆ ನಿಮಗೆ ಸುವರ್ಣಾವಕಾಶ, 18-23  ವಯಸ್ಸಿನ ಮಹಿಳೆಯರು ಸ್ವತಃ ಅನುಭವ ಪಡೆಯಬಹುದಾಗಿದೆ.

ಪ್ಯಾನ್ ಇಂಡಿಯಾ ಇನಿಶಿಯೇಟಿವ್ ಆಯೋಜಿಸಿರುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈಕಮಿಷನರ್ ಆಗುವ ಕಾಲ ಕೂಡಿ ಬರಲಿದೆ,  ಅಕ್ಟೋಬರ್ 11 ರಂದು ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯಿದ್ದು ಅಂದೇ ಸ್ಪರ್ಧೆ ನಡೆಯಲಿದೆ.

ಇನ್ನು ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನ್ ಕೂಡ, ಡೆಪ್ಯುಟಿ ಬ್ರಿಟಿಷ್ ಹೈ ಕಮಿಷನರ್ ಫಾರ್ ಎ ಡೇ ಎಂಬ ಕಾರ್ಯಕ್ರಮ ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು, ಲಿಂಗ ಸಮಾನತೆ ಏಕೆ ಮುಖ್ಯ ಎಂಬ ವಿಷಯಗ ಬಗ್ಗೆ ಒಂದು ನಿಮಿಷದ ವಿಡಿಯೋ ಮಾಡ ಬೇಕು, ಮತ್ತು ಅವರ ದೊಡ್ಡ ಸ್ಫೂರ್ತಿ ಯಾರು ಎಂಬ ಬಗ್ಗೆಯೂ ವಿಡಿಯೋದಲ್ಲಿ ತಿಳಿಸಿ, @UKindia  ಮತ್ತು @UKinBenngaluru ವಿಳಾಸಕ್ಕೆ ಟ್ವಿಟ್ಟರ್ , ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ನಲ್ಲಿ #Dayofthegirl ಎಂದು ಟ್ಯಾಗ್ ಮಾಡ ಬೇಕಾಗಿದೆ. ಸೆಪ್ಟಂಬರ್ 10 ವಿಡಿಯೋ ಅಪ್ ಲೋಡ್ ಮಾಡಲು ಕೊನೆಯ ದಿನಾಂಕವಾಗಿದೆ.

ಈ ಬಾರಿ ಕರ್ನಾಟಕದ ಮಹಿಳೆಯರಿಗೆ ಈ ಅವಕಾಶ ಸಿಕ್ಕಿದೆ, ರಾಜ್ಯದ ಯುವತಿಯರು ಒಂದು ದಿನದ ಮಟ್ಟಿಗೆ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಆಗಿ ಅನುಭವ ಪಡೆಯಬಹುದಾಹಗಿದೆ, ಇಲ್ಲಿ ಆಯ್ಕೆಯಾಗುವ ಸ್ಪರ್ಧಿ ಈ ವೇದಿಕೆಯನ್ನು ಅರ್ಥ ಮಾಡಿಕೊಂಡು ಲಿಂಗ ಸಮಾನತೆಯ ಮಹತ್ವ ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್  ರಿಚರ್ಡ್ ಹೋಮರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com