ಡಿಕೆಶಿ ಬಂಧನಕ್ಕೆ ತೀವ್ರ ಆಕ್ರೋಶ: ಪ್ರತಿಭಟನೆಗಳಿಂದ ಪರದಾಡಿದ ಜನ ಸಾಮಾನ್ಯರು  

ತಮ್ಮ ನಾಯಕನ ಬಂಧನ ವಿರೋಧಿಸಿ ಡಿಕೆ.ಶಿವಕುಮಾರ್ ಬೆಂಬಲಿಗರು, ಕಾಂಗ್ರೆಸ್ ನಾಯಕರು ರಾಜ್ಯದ ಹಲವೆಡೆ ಬುಧವಾರ ನಡೆಸಿದ ಪ್ರತಿಭಟನೆ ವೇಳೆ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. 
ಪ್ರತಿಭಟನಾ ಸ್ಥಳ
ಪ್ರತಿಭಟನಾ ಸ್ಥಳ
Updated on

ಬೆಂಗಳೂರು: ತಮ್ಮ ನಾಯಕನ ಬಂಧನ ವಿರೋಧಿಸಿ ಡಿಕೆ.ಶಿವಕುಮಾರ್ ಬೆಂಬಲಿಗರು, ಕಾಂಗ್ರೆಸ್ ನಾಯಕರು ರಾಜ್ಯದ ಹಲವೆಡೆ ಬುಧವಾರ ನಡೆಸಿದ ಪ್ರತಿಭಟನೆ ವೇಳೆ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. 

ಡಿ,ಕೆ.ಶಿವಕುಮಾರ್ ಬಂಧನ ವಿರೋಧಿಸಿ ಅವರ ಅಭಿಮಾನಿಗಳು 13 ಬಸ್ ಗಳಿಗೆ ಬೆಂಕಿ ಹಚ್ಚಿದ್ದು, ಹಲವೆಡೆ ಕಲ್ಲು ತೂರಾಟ ನಡೆಸಿದ್ದಾರೆ. ತೀವ್ರ ರೂಪ ಪಡೆದುಕೊಂಡಿದ್ದ ಪ್ರತಿಭಟನೆ ರಾಮನಗರರ-ಕನಕಪುರದ ನಡುವಿನ ಸಾರಿಗೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುವಂತೆ ಮಾಡಿತ್ತು. ರಾಮನಗರದಿಂದ ರಾಜ್ಯದ ಇತರೆಡೆಗೆ ತೆರಳುವ ಸಾರಿಗೆ ವ್ಯವಸ್ಥೆಗಳೂ ಅಸ್ತವ್ಯಸ್ತಗೊಂಡಿತ್ತು. ರಾಮನಗರದಿಂದ ಇತರೆಡೆಗೆ ಕೆಲಸಗಳಿಗೆ ತೆರಳಿದ್ದ ಜನರು ಸರಿಯಾದ ಸಮಯಕ್ಕೆ ತಮ್ಮ ತಮ್ಮ ಮನೆಗಳು ಹಾಗೂ ಕಚೇರಿಗೆ ತಲುಪಲು ಸಾಧ್ಯವಾಗದೆ ಪರದಾಡುವಂತಾಗಿತ್ತು. 

ಮನೆಗಳಿಗೆ ತೆರಳುವ ಸಲುವಾಗಿ ಜನ ಸಾಮಾನ್ಯರು ರಸ್ತೆಯಲ್ಲಿ ಬರುತ್ತಿದ್ದ ಆ್ಯಂಬುಲೆನ್ಸ್, ಸರಕು ವಾಹನಗಳು ಸೇರಿದಂತೆ ಇತರೆ ವಾಹನಗಳ ಸಹಾಯವನ್ನು ಕೇಳುತ್ತಿದ್ದರು. 

ಗಣೇಶ ಹಬ್ಬ ಇದ್ದ ಹಿನ್ನಲೆಯಲ್ಲಿ ಹುಟ್ಟೂರು ಆಂಧ್ರಪ್ರದೇಶದ ಶ್ರೀಕಕುಲಂಗೆ ಭೇಟಿ ನೀಡಿದ್ದೆ. ಮಂಗಳವಾರವಷ್ಟೇ ನಾನು ಬೆಂಗಳೂರಿಗೆ ವಾಪಸ್ಸಾಗಿದ್ದೆ. ಕನಕಪುರಕ್ಕೆ ಯಾವುದೇ ಬಸ್ ಗಳಿರಲಿಲ್ಲ. ಹೀಗಾಗಿ ಮೆಜೆಸ್ಟಿಕ್ ನ ಲಾಡ್ಜ್ ವೊಂದರಲ್ಲಿ ಉಳಿದುಕೊಂಡಿದ್ದೆ. ಒಂದು ರಾತ್ರಿಗೆ ರೂ.500 ಖರ್ಚು ಮಾಡುವಂತಾಯಿತು. ಬುಧವಾರ ಕೂಡ ಬಸ್ ಗಳು ಸಿಗಲಿಲ್ಲ. ಹೀಗಾಗಿ ಮೆಜೆಸ್ಟಿಕ್ ನಿಂದಲೇ ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಆಟೋ ಮಾಡಿಕೊಂಡು ತೆರಳಿದ್ದೆ ಆಟೋ ಚಾಲಕ ರೂ.800 ಪಡೆದಿದ್ದ. ಇದಾದ ಬಳಿಕ ಹಾರೋಹಳ್ಳಿಯಿಂದ 8 ಮಂದಿಯೊಂದಿಗೆ ರೂ.30 ನೀಡಿ ಕನಕಪುರಕ್ಕೆ ತೆರಳಿದ್ದೆ. 4 ಕಿಮೀ ನಡೆದು ರೂಂ ಸೇರಿಕೊಂಡೆ. ನಗರದಲ್ಲಿ ಪ್ರತಿಭಟನೆ ಹಾಗೂ ಬಂದ್ ನಡೆಯುತ್ತಿದೆ ಎಂಬ ಊಹೆಯೂ ನನಗಿರಲಿಲ್ಲ. ಸಾಮಾನ್ಯವಾಗಿ ನಾನು ರೈಲಿನಲ್ಲಿ ಬರಲು ರೂ.500 ಖರ್ಚು ಮಾಡುತ್ತಿದ್ದೆ. ಕನಕಪುರ ತಲುಪಲು ರೂ.75 ಖರ್ಚು ಮಾಡುತ್ತಿದೆ. ಇದೀಗ ಮೂರು ಪಟ್ಟು ಹಣ ಹೆಚ್ಚು ಖರ್ಚು ಮಾಡುವಂತಾಯಿದು ಎಂದು ಕನಕಪುರದಲ್ಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ತೇಜಸ್ (37) ಎಂಬುವವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com