ಪತ್ನಿಯನ್ನು ಕಾಣಲು ಏರ್ ಪೋರ್ಟ್ ಗೆ ಹೋಗಿ ಸಿಕ್ಕಿ ಬಿದ್ದು ಜೈಲುಕಂಬಿ ಎಣಿಸಿದ ಪತಿ!

ವಿಮಾನ ನಿಲ್ದಾಣದಲ್ಲಿ ಗರ್ಭಿಣಿ ಪತ್ನಿಯನ್ನು ಬೀಳ್ಕೊಡುವಾಗ ಕೊನೆಯವರೆಗೂ ಹೋಗಿ ಗುಡ್ ಬೈ ಹೇಳಿ ಬರಬೇಕೆಂದು ಬಯಸಿದ ಉದ್ಯಮಿ ಪತಿ ತಾನು ಮಾಡಿದ ತಪ್ಪಿನಿಂದ ಜೈಲು ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಗರ್ಭಿಣಿ ಪತ್ನಿಯನ್ನು ಬೀಳ್ಕೊಡುವಾಗ ಕೊನೆಯವರೆಗೂ ಹೋಗಿ ಗುಡ್ ಬೈ ಹೇಳಿ ಬರಬೇಕೆಂದು ಬಯಸಿದ ಉದ್ಯಮಿ ಪತಿ ತಾನು ಮಾಡಿದ ತಪ್ಪಿನಿಂದ ಜೈಲು ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ.


ಆಗಿದ್ದಿಷ್ಟೇ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆಕ್ -ಇನ್ ಏರಿಯಾದವರೆಗೂ ಹೋಗಿ ಹೆಂಡತಿಗೆ ಗುಡ್ ಬೈ ಹೇಳಿ ಬರೋಣವೆಂದು ಪತಿ ತನ್ನ ಪತ್ನಿಯ ವಿಮಾನದ ಟಿಕೆಟ್ ನ್ನು ತಿದ್ದುಪಡಿ ಮಾಡಿ ಒಳಗೆ ಹೋಗಿದ್ದರು. ಸರಿ ಪತ್ನಿಗೆ ಪ್ರೀತಿಯಿಂದ ಗುಡ್ ಬೈ ಹೇಳಿ ಬೀಳ್ಕೊಟ್ಟು ಎಲ್ಲ ಆಯಿತು. ವಾಪಾಸ್ ಪತಿ ಬರುವಾಗ ನಿರ್ಗಮ ಗೇಟ್ ನಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿಗಳು(ಸಿಐಎಸ್ಎಫ್) ಬಂಧಿಸಿದರು.


ಕಳೆದ 8 ವರ್ಷಗಳಿಂದ ಬ್ಯುಸಿನೆಸ್ ವೀಸಾದ ಮೇಲೆ ಬೆಂಗಳೂರಿನಲ್ಲಿ ನೆಲೆಸಿರುವ ಯೆಮನ್ ಪ್ರಜೆ ವಾಸೀಮ್ ಮೊಹಮ್ಮದ್ ಮೊನ್ನೆ ಸೆಪ್ಟೆಂಬರ್ 1ರಂದು ಸೌದಿ ಅರೇಬಿಯಾದಿಂದ ಜೆಡ್ಡಾಗೆ ಪ್ರಯಾಣಿಸುತ್ತಿದ್ದ ಪತ್ನಿಯನ್ನು ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕಂಡು ಮಾತನಾಡಿಸಿ ಗುಡ್ ಬೈ ಹೇಳಲು ಹೋಗಿದ್ದರು. ಅದು ಅಂದು ರಾತ್ರಿ 9.25ಕ್ಕೆ ವಿಮಾನ ನಿಲ್ದಾಣದಿಂದ ಹೊರಡಬೇಕಾಗಿತ್ತು. ಪತ್ನಿಯ ವಿಮಾನ ಟಿಕೆಟ್ ನ್ನು ತಿದ್ದುಪಡಿ ಮಾಡಿ ತಮ್ಮ ಹೆಸರನ್ನು ಕೂಡ ಪತ್ನಿಯ ಹೆಸರಿನ ಜೊತೆಗೆ ಪ್ರಯಾಣಿಕರ ಹೆಸರಿನಲ್ಲಿ ಸೇರಿಸಿಕೊಂಡಿದ್ದರು. 


ಪತ್ನಿಯನ್ನು ವಿಮಾನ ನಿಲ್ದಾಣದಲ್ಲಿ ಕಂಡು ಮಾತನಾಡಿಸಿ ಹಿಂತಿರುಗಿ ಬರುವಾಗ ಸಿಐಎಸ್ಎಫ್ ಅಧಿಕಾರಿಗಳು ತಪಾಸಣೆ ನಡೆಸಿ ಬಂಧಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com